ಕೀಟ ಬಾಧೆಯ ಹಾವಳಿ- ಹತೋಟಿ ಕುರಿತು ಮಾಹಿತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.17   ಇತ್ತೀಚೆಗೆ ಕಂದು ಜಿಗಿ ಹುಳು ಕೀಟ ಬಾದೆಯು ಮಂಗಳೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಕಾಣಿಸಿಕೊಂಡಿರುತ್ತದೆ. ಈ ಕೀಟವು ರಸ ಹೀರುವ ಕೀಟಗಳ ಗುಂಪಿಗೆ ಸೇರಿರುವುದಾಗಿದ್ದು ಭತ್ತದ ಬೆಳೆಯ ಕಾಂಡದ ಭಾಗಗಳಲ್ಲಿ ಕುಳಿತು ರಸವನ್ನು ಹೀರುವ ಮೂಲಕ ಭತ್ತದ ಬೆಳೆಗೆ ಹಾನಿಯುಂಟು ಮಾಡುತ್ತದೆ. ಈ ಕೀಟ ಬಾಧೆಯನ್ನು ತಡೆಗಟ್ಟಲು ಹೆಚ್ಚುವರಿ ಸಾರಜನಕ ಗೊಬ್ಬರ ಬಳಕೆಯನ್ನು ನಿಲ್ಲಿಸಬೇಕು ಹಾಗೂ ನೀರನ್ನು ಹೆಚ್ಚು ಗದ್ದೆಯಲ್ಲಿ ನಿಲ್ಲಿಸಬಾರದು.

ಈ ಕೀಟದ ಹಾವಳೆಯನ್ನು ನಿಯಂತ್ರಿಸಲು ಬ್ಯುಪ್ರೋಫೆಜಿನ್ 1.5 ಮಿ.ಲೀ ಪ್ರತೀ ಲೀಟರ್ ಮತ್ತು ಥಯಾಮೆತಾಕ್ಸಾಮ್ 0.25 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗ್ಗೆ ಅಥವಾ ಸಂಜೆ ವೇಳೆ ಸಿಂಪಡಣೆ ಮಾಡುವುದರ ಮೂಲಕ ಹತೋಟಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top