ಅಂಚೆ ಕಚೇರಿಯಲ್ಲಿ ಮೆಸ್ಕಾಂ ಬಿಲ್ ಸ್ವೀಕಾರ 

(ನ್ಯೂಸ್ ಕಡಬ) newskadaba.com,ಮಂಗಳೂರು, ಡಿ.17    ಅಂಚೆ ಇಲಾಖೆ ಮೂಲಕ ಮೆಸ್ಕಾಂ ಬಿಲ್ ಸ್ವೀಕೃತಿಯ   ಒಪ್ಪಂದವು  ಎರಡು ವರ್ಷದ ಅವಧಿಗೆ ನವೀಕರಣಗೊಂಡಿದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೆಸ್ಕಾಂ ಗ್ರಾಹಕರು ತಮ್ಮ  ವಿದ್ಯುಚ್ಛಕ್ತಿ ಬಿಲ್ ನ್ನು ತಮ್ಮ ಸಮೀಪದ ಯಾವುದೇ ಅಂಚೆ ಕಛೇರಿಯಲ್ಲಿ ಕಟ್ಟಬಹುದೆಂದು ಈ ಮೂಲಕ ತಿಳಿಸಲಾಗಿದೆ.

ಕಳೆದ ವರ್ಷದಲ್ಲಿ ತಾಂತ್ರಿಕ ದೋಷಗಳಿಂದಾಗಿ, ಮೆಸ್ಕಾಂಗೆ ಕ್ಲಪ್ತ ಸಮಯದಲ್ಲಿ ಕೆಲವು ಬಿಲ್ಲಿನ ಮೊತ್ತವನ್ನು ಸಂದಾಯ ಮಾಡುವುದರಲ್ಲಿದ್ದ ಎಲ್ಲಾ ತೊಂದರೆಗಳು ಈಗ  ನಿವಾರಣೆ ಆಗಿದ್ದು,  ಗ್ರಾಹಕರು ಯಾವುದೇ ಹಿಂಜರಿಕೆಯಿಲ್ಲದೆ ಅಂಚೆ ಕಛೇರಿಗಳಲ್ಲಿ ಈಗ ಮೆಸ್ಕಾಂ ಬಿಲ್‍ನ ಮೊತ್ತವನ್ನು ಪಾವತಿಸಬಹುದು ಹಾಗೂ ಮೆಸ್ಕಾಂ ಬಿಲ್ ನ ಕೊನೆಯ ದಿನಾಂಕದ ಬಳಿಕವೂ ಗ್ರಾಹಕರು ವಿದ್ಯುಚ್ಛಕ್ತಿ ಬಿಲ್ ನ್ನು ಅಂಚೆ ಕಛೇರಿಗಳಲ್ಲಿ ಕಟ್ಟಬಹುದು.  ಈಗಾಗಲೇ ಪ್ರತಿ ತಿಂಗಳು 89000 ಗ್ರಾಹಕರು ಮಂಗಳೂರು, ಪುತ್ತೂರು, ಉಡುಪಿ ವಿಭಾಗದ ಅಂಚೆ ಕಛೇರಿಗಳಲ್ಲಿ ಮೆಸ್ಕಾಂ ಬಿಲ್‍ನ್ನು ಪಾವತಿಸುತ್ತಿದ್ದು, ಉಳಿದ ಮೆಸ್ಕಾಂ ಗ್ರಾಹಕರೂ ಈ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2218400, 2212305,  ಹಾಗೂ ವಾಟ್ಸ್‍ಆಪ್ ಸಂಖ್ಯೆ: 9448291072 ನ್ನು ಸಂಪರ್ಕಿಸಲು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

Also Read  ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನ ➤ ಮಂಡಿಯೂರಿ, ಅತ್ತು ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು

error: Content is protected !!
Scroll to Top