ಕಡ್ಯ ಕೊಣಾಜೆ: ಪಡಿತರ ವಿತರಣಾ ವಿಭಾಗ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.17    ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಣಾಜೆ ಶಾಖೆಯಲ್ಲಿ ಪಡಿತರ ವಿತರಣಾ ವಿಭಾಗದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.


ಪ್ರಗತಿಪರ ಕೃಷಿಕ ವಾಸುದೇವ ಭಟ್ ಕಡ್ಯ ಉದ್ಘಾಟಿಸಿ ಮಾತನಾಡಿ, ಸಿಎ ಬ್ಯಾಂಕ್ ಇಲ್ಲಿ ಪ್ರಾರಂಭಗೊಂಡು ಇಲ್ಲಿಯವರೆಗೆ ಇಲ್ಲಿನ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಇನ್ನು ಪಡಿತರ ವಿತರಣೆಯಲ್ಲೂ ಇದೇ ರೀತಿ ಕೆಲಸ ನಿರ್ವಹಿಸಿ ಗ್ರಾಮಸ್ಥರು ಕೂಡ ಸಹಕರಿಸಿ ಎಂದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಕಚೇರಿಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳು ವ್ಯವಹಾರಿಕವಾಗಿ ಅಭಿವೃದ್ಧಿಯಾಗುವುದರೊಂದಿಗೆ ಶಾಖಾ ವ್ಯಾಪ್ತಿಯ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ ಮುಂದೆಯೂ ಕಡಬ ಪ್ರಾ.ಕೃ.ಸ.ಸಂಘದ ವತಿಯಿಂದ ಜನಪರ ಕೆಲಸಗಳು ನಡೆಯಲಿ ಎಂದರು. ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಮಾತನಾಡಿ ಕಡ್ಯ ಕೊಣಾಜೆ ಇಂದು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿನ ಅಭಿವೃದ್ಧಿಯ ಹಿಂದೆ ಖಂಡಿತ ಹಿರಿಯರ ಶ್ರಮವಿದೆ ಎಂದರು. ಗ್ರಾ.ಪಂ. ಅಧ್ಯಕ್ಷೆ ಬೇಬಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಘುಚಂದ್ರ ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಸೀತಾರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಸುಂದರ ಗೌಡ ಮಂಡೆಕರ, ಪೂವಪ್ಪ ಗೌಡ, ಸುದರ್ಶನ ಗೌಡ ಕೋಡಿಂಬಾಳ, ಅಂಗಜ, ರಾಜೀವಿ, ಲೀಲಾವತಿ ರೈ, ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು. ಕಡಬ ಕೃ.ಪ.ಸ.ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಸ್ವಾಗತಿಸಿ, ಕೊಣಾಜೆ ಶಾಖಾ ವ್ಯವಸ್ಥಾಪಕ ಆನಂದ ಕೊಂಕ್ಯಾಡಿ ವಂದಿಸಿದರು. ಕೃಷ್ಣಪ್ಪ ಆಕೋಟೆಕಾನ ಕಾರ್ಯಕ್ರಮ ನಿರೂಪಿಸಿದರು.

Also Read  ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ ವಿ 15 ಪ್ರೊ ಆಂಡ್ರಾಯ್ಡ್ ಮೊಬೈಲ್ ► ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡಬದ ದುರ್ಗಾಂಬಾ ಮೊಬೈಲ್ಸ್ ನಲ್ಲಿ ಬಿಡುಗಡೆ

 

error: Content is protected !!
Scroll to Top