ಘಟಕಾಧಿಕಾರಿಗಳ ಸಭಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.16  ಭಾನುವಾರರಂದು ಅಪರಾಹ್ನ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರು ಹಾಗೂ ಡೆಪ್ಯುಟಿ ಕಮಾಡೆಂಟ್ ರಮೇಶ್ ರವರ ಅಧ್ಯಕ್ಷತೆಯಲ್ಲಿ ಘಟಕಾಧಿಕಾರಿಗಳ ಸಭೆ ನಡೆಯಿತು.

ಸಭೆಯಲ್ಲಿ ಎಲ್ಲಾ ಘಟಕಾಧಿಕಾರಿಗಳಿಗೆ ಕ್ಷೇಮಾಭಿವೃದ್ಧಿ ವಂತಿಗೆ ಬಾಕಿ ಇರುವ ಗೃಹರಕ್ಷಕರ ನವೀಕರಣ ಕಡ್ಡಾಯವಾಗಿ ಸಂಗ್ರಹಿಸಿ ಜಿಲ್ಲಾ ಕಚೇರಿಗೆ ಹಸ್ತಾಂತರಿಸಿ ಎಂದರು. ತಮ್ಮ ತಮ್ಮ ಘಟಕದಲ್ಲಿ ಖಾಲಿ ಇರುವ ಗೃಹರಕ್ಷಕರ ಹುದ್ದೆಯನ್ನು ಜಿಲ್ಲಾ ಕಚೇರಿಯ ನಿಯಮನುಸಾರ ಭರ್ತಿ ಮಾಡಲು ಎಲ್ಲಾ ಘಟಕಾಧಿಕಾರಿಗಳಿಗೆ/ಪ್ರಭಾರ ಘಟಕಾಧಿಕಾರಿಗಳಿಗೆ ಸೂಚಿಸಿದರು. ಅದಲ್ಲದೆ ಎಲ್ಲಾ ಇಲಾಖೆಯಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸುವವರನ್ನು ರೊಟೇಶನ್ ಮಾಡುವಂತೆ ಸೂಚನೆ ನೀಡಿದರು. ಎಲ್ಲಾ ಇಲಾಖೆಯ ಕರ್ತವ್ಯದವರನ್ನು ಕೇಂದ್ರ ಕಚೇರಿಯಿಂದ ರೊಟೇಶನ್ ಮಾಡಲಾಗುವುದು ಈ ಬಗ್ಗೆ ತಮ್ಮ ಎಲ್ಲಾ ಘಟಕದ ಗೃಹರಕ್ಷಕರಿಗೂ ಮಾಹಿತಿ ನೀಡುವಂತೆ ತಿಳಿಸಿದರು. ಇನ್ನೂ ಮುಂದೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯ ಬಗ್ಗೆ ಸುಳಿವು ನೀಡಿದರು. ಘಟಕಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು, ಡೆಪ್ಯುಟಿ ಕಮಾಡೆಂಟ್ ರಮೇಶ್, ಕಚೇರಿ ಅಧಿಕ್ಷಕಾರದ ರತ್ನಾಕರ್, ಪ್ರಥಮ ದರ್ಜೆ ಸಹಾಯಕರಾದ ಅನಿತಾ.ಟಿ.ಎಸ್. ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಹಾಗೂ ಪ್ರಭಾರ ಘಟಕಾಧಿಕಾರಿಗಳು ಉಪಸ್ಥಿತರಿದ್ದರು.

Also Read  ಸ್ವಂತ ಚಿಕ್ಕಪ್ಪನಿಂದಲೇ ಕಾಲೇಜು ವಿದ್ಯಾರ್ಥಿನಿಯ ನಿರಂತರ ಅತ್ಯಾಚಾರ ➤ ಪೊಲೀಸರಿಗೆ ದೂರು

error: Content is protected !!
Scroll to Top