2019 ರ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.16  ಗೃಹರಕ್ಷಕ ದಿನಾಚರಣೆ ಪ್ರಯುಕ್ತ ನಿನ್ನೆ ಗೃಹರಕ್ಷಕ ದಳದ ಕಚೇರಿ ಮೇರಿಹಿಲ್ ಇಲ್ಲಿ ಗೃಹರಕ್ಷಕ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರಂಭದ ಉಧ್ಘಾಟನೆಯನ್ನು ಶ್ರೀ ಮಂಜುನಾಥ ಶೆಟ್ಟಿ ಸಹಾಯಕ ಪೊಲೀಸ್ ಆಯಕ್ತರು ಸಂಚಾರ ವಿಭಾಗ ಮಂಗಳೂರು ಇವರು ನೆರವೇರಿಸಿರುತ್ತಾರೆ.

ಮುಖ್ಯ ಅತಿಥಿಗಳಾಗಿ ಬಿ ಜಗಧೀಶ್, ಸಹಾಯಕ ಪೊಲೀಸ್ ಆಯಕ್ತರು ಕೇಂದ್ರ ಉಪ ವಿಭಾಗ ಬಂದರು ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀ ದಯಾನಂದ ಕತ್ತಲಸಾರ್ ಅದ್ಯಕ್ಷರು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಇವರು ಆಗಮಿಸಿರುತ್ತಾರೆ. ಉಧ್ಘಾಟನೆಯನ್ನು ನೇರವೇರಿಸಿದ್ದಂತಹ ಶ್ರೀ ಮಂಜುನಾಥ ಶೆಟ್ಟಿ ಸಹಾಯಕ ಪೊಲೀಸ್ ಆಯಕ್ತರು ಸಂಚಾರ ವಿಭಾಗ ಮಂಗಳೂರು ಇವರು ಗೃಹರಕ್ಷಕರನ್ನು ಉದ್ದೇಶಿಸಿ ಗೃಹರಕ್ಷಕರು ಯಾವುದೇ ಆಪೇಕ್ಷೆಯಿಲ್ಲದೆ ದಿನದ 24 ಗಂಟೆಯು ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಗೃಹರಕ್ಷಕರ ಕೆಲಸ ಶ್ರೇಷ್ಠ ಕೆಲಸ ಎಂದು ಶ್ಲಾಘಿಸಿದರು. ನಂತರ ಮುಖ್ಯ ಅತಿಥಿಗಳಾದ ಬಿ. ಜಗದೀಶ್, ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪ ವಿಭಾಗ ಬಂದರು ಇವರು ಮಾತನಾಡಿ ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಾರೆ. ಕೆಲಸಗಳಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಶ್ಲಾಘಿಸಿದರು. ವಿಶೇಷ ಆಹ್ವಾನಿತರಾಗಿ ಶ್ರೀ ದಯಾನಂದ ಕತ್ತಲಸಾರ್ ಅಧ್ಯಕ್ಷರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ಮಾತನಾಡಿ ಸಮಾಜದಲ್ಲಿ ಎಷ್ಟು ದಿನ ಬದುಕಿದ್ದೇವೆ ಎನ್ನುವುದರ ಬದಲಿಗೆ ಈ ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ ಎಂದರು ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿಯುವ ಗೃಹರಕ್ಷಕರ ಸೇವೆ ದೇವರ ಸೇವೆ ಎಂದು ಮಾತನಾಡಿದರು. ಯಾವುದೇ ಭದ್ರತೆ ಹಾಗೂ ಸವಲತ್ತು ಇಲ್ಲದೆ ನಿಷ್ಕಾಮ ಸೇವೆ ಮಾಡುವ ಗೃಹರಕ್ಷಕರ ಸೇವೆ ಅನನ್ಯ ಮತ್ತು ಗೃಹರಕ್ಷಕರಿಗೆ ದುಶ್ಚಟಗಳಿಂದ ದೂರವಿರಿ ಮತ್ತು ದುಶ್ಚಟಗಳನ್ನು ತಡೆಯುವ ಕಾರ್ಯಮಾಡಿ ಎಂದು ಕಿವಿಮಾತು ಹೇಳಿದರು. ಗೃಹರಕ್ಷಕರಿಗೆ ತುಳು ಅಕಾಡೆಮಿಯಿಂದ ಆಗುವ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು. ಗೃಹರಕ್ಷಕರಿಗೆ ಆಯಸ್ಸುಆಯುರಾರೋಗ್ಯ ದೇವರು ನೀಡಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಮಾತನಾಡಿ ಗೃಹರಕ್ಷಕರ ದಿನಾಚರಣೆಯಂಗವಾಗಿ ಶುಭ ಹಾರೈಸಿದರು. ಸರ್ಕಾರದಿಂದ ಆದಷ್ಟು ಬೇಗ ನಿಮಗೆಲ್ಲಾ ಗೌರವ ಧನ ಹೆಚ್ಚು ಆಗಲಿ ಎಂದು ಹಾರೈಸಿದರು.

Also Read  ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್


ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಪದಕ, ರಾಷ್ಟ್ರಪತಿಗಳ ಶ್ಲಾಘನೀಯ ಪದಕ, ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಪುರಸ್ಕೃತರಾದಂತಹ ಶ್ರೀ ರಮೇಶ್ ಉಪಸಮಾದೇಷ್ಠರು ಜಿಲ್ಲಾ ಗೃಹರಕ್ಷಕ ದಳ ದ.ಕ ಜಿಲ್ಲೆ ಮತ್ತು ಉಡುಪಿ ಹಾಗೂ ಘಟಕಾಧಿಕಾರಿಗಳಾದ ಶ್ರೀ ಗೋಪಾಲ್ ಘಟಕಾಧಿಕಾರಿ ಕಡಬ, ವಸಂತ ಕುಮಾರ್ ಬೆಳ್ಳಾರೆ, ಪಾಂಡಿರಾಜ್ ಮೂಡಬಿದ್ರೆ ಘಟಕ ಇವರಿಗೆ ಸನ್ಮಾನ ನಡೆಸಲಾಯಿತು ಹಾಗೂ ಘಟಕಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸಮಾದೇಷ್ಟರಾದ ಶ್ರೀ ರಮೇಶ್ ಅವರು ಸ್ವಾಗತಿಸಿದರು. ಶ್ರೀ ಜಯಾನಂದ ಘಟಕಾಧಿಕಾರಿ ಬೆಳ್ತಂಗಡಿ ಘಟಕ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀ ಸನತ್‍ಕುಮಾರ್ ಆಳ್ವ ವಂದನಾರ್ಪಣೆ ಗೈದರು ಮತ್ತು ಜಿಲ್ಲೆಯ ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  13 ವರ್ಷ ಪ್ರೀತಿಸಿ ಮದುವೆ ಹಿಂದಿನ ದಿನ ನಾಪತ್ತೆಯಾದ ಪ್ರೇಮಿ.!

error: Content is protected !!
Scroll to Top