ರಕ್ತದಾನ ಶ್ರೇಷ್ಠದಾನ – ಡಾ: ಚೂಂತಾರು

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.16   ನಗರದ ಪದುವಾ ಹೈಸ್ಕೂಲ್‍ನಲ್ಲಿ ಜೆಸಿಐ ಮಂಗಳೂರು ಲಾಲ್‍ಬಾಗ್, ಲಯನ್ಸ್ ಕ್ಲಬ್ ಹಾಗೂ ಲಿಯೋಕ್ಲಬ್, ಕದ್ರಿಹಿಲ್ಸ್ ಮತ್ತು ನೇತ್ರಾವತಿ ಮಂಗಳೂರು, ರೋಟರಿ ಕ್ಲಬ್ ಮಂಗಳೂರು ಹಿಲ್‍ಸೈಡ್ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಚೂಂತಾರು ಸರೋಜಿನಿ ಪ್ರತಿಷ್ಠಾನ ಮಂಗಳೂರು, ಅರೆಹೊಳೆ ಪ್ರತಿಷ್ಠಾನ, ಪ್ರಸಾದ್ ನೇತ್ರಾಲಯ ಯುನೈಟೆಡ್ ಪ್ರೆಂಡ್ಸ್ ಬಿಜೈ, ಶ್ರೀ ವೇದಮಾಯು ಆಯುರ್ವೆದ ಆಸ್ಪತ್ರೆ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‍ಮೆಂಟ್ ಮತ್ತು ಪದುವಾ ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್ ಕಾಲೇಜ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಯೋಗ ಮಾಹಿತಿ ಶಿಬಿರ, ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ, ಮಧುಮೇಹ ತಪಾಸಣೆ ಶಿಬಿರ, ನೇತ್ರ ತಪಾಸಣೆ ಶಿಬಿರ ಭಾನುವಾರದಂದು  ನಡೆಯಿತು.

ಪ್ಯೂಷನ್ 2019 ಎಂಬ ಘೋಷವಾಕ್ಯದೊಂದಿಗೆ ಮಂಗಳೂರಿನ ಜನತೆಗೆ ವೈದ್ಯಕೀಯ ಸಲಹಾ ಶಿಬಿರವನ್ನು ಹಲವಾರು ಸಂಘ ಸಂಸ್ಥೆಗಳು ಸೇರಿ ಸಂಘಟಿಸಿದರು. ಜೆಸಿಐ ಇದರ ಪ್ರಾಂತೀಯ ಉಪಾದ್ಯಕ್ಷೆ ಶ್ರೀ ಸಂಜನಾ ಹೆಗ್ಡೆಯವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ವೆನ್‍ಲಾಕ್ ಆಸ್ಪತ್ರೆಯ ಶರತ್ ಕುಮಾರ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಚೂಂತಾರು ಸರೋಜಿನಿ ಪ್ರತಿಷ್ಠಾನ ಇದರ ಕಾರ್ಯದರ್ಶಿ ಡಾ: ಮುರಲೀ ಮೋಹನ್ ಚೂಂತಾರುರವರು ಮಾತನಾಡಿ ರಕ್ತದಾನಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ. ರಕ್ತದಾನವೇ ಶ್ರೇಷ್ಠದಾನ ಎಂದರು. ನಿಯಮಿತವಾಗಿ ರಕ್ತದಾನ ಮಾಡಿದ್ದಲ್ಲಿ ಆರೋಗ್ಯ ವೃದ್ದಿಸುತ್ತದೆ ಎಂದು ಅವರು ನುಡಿದರು. ಜೆಸಿಐ ಮಂಗಳೂರು ಇದರ ಅದ್ಯಕ್ಷರಾದ ಶ್ರೀ ಪೀಟರ್ ಅಂಟೋನಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಡಾ: ಕೇಶವರಾಜ್, ಡಾ: ಸುರೇಶ್ ನೆಗಲಗುಳಿ, ಶ್ರೀ ಪ್ರವೀಣ್ ಉಡುಪ, ಲಯನ್ಸ್ ಅರುಣ್ ರೊಡ್ರೀಗಸ್, ಲೇವಿ ಮೆಲಿಶ ಡಿಸೋಜಾ, ವೆನ್‍ಲಾಕ್ ಆಸ್ಪತ್ರೆಯ ಅಂಟೋನಿ ಮುಂತಾದವರು ಉಪಸ್ಥಿತರಿದ್ದರು. 25 ಮಂದಿ ರಕ್ತದಾನ ಮಾಡಿದರು. ನೂರಕ್ಕು ಹೆಚ್ಚು ಮಂದಿ ಈ ಶಿಬಿರದ ಪ್ರಯೋಜನ ಪಡೆದರು.

Also Read  ಸುಳ್ಯ: ತಾಲೂಕು ಕಛೇರಿಯಲ್ಲಿ ದೇವರಾಜು ಅರಸುರವರ 105 ನೇ ಜನ್ಮ ದಿನಾಚಾಚರಣೆ

error: Content is protected !!
Scroll to Top