(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.14 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 5, 6 ಮತ್ತು 7 ರಂದು ಕಲಬುರಗಿಯಲ್ಲಿ ನಡೆಯಲಿದೆ. ಈ ನುಡಿ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಪ್ರತಿನಿಧಿಯಾಗಿ ತಮ್ಮ ಹೆಸರುಗಳನ್ನು ಆಯಾಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಅಥವಾ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂ.250 ಪ್ರತಿನಿಧಿ ಶುಲ್ಕ ನೀಡಿ ಡಿಸೆಂಬರ್ 12 ರಿಂದ ಜನವರಿ 14 ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿವಸಗಳಿಗೆ ಒಂದು ಹಾಗೂ ಒಂದಕ್ಕಿಂತ ಹೆಚ್ಚು ಪುಸ್ತಕ ಮಳಿಗೆ ಬೇಕಾದಲ್ಲಿ 2500 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ, ವಾಣಿಜ್ಯ ಮಳಿಗೆಗಳಿಗೆ 3000 ರೂಪಾಯಿ ಬಾಡಿಗೆ ನಿಗದಿಯಾಗಿರುತ್ತದೆ, ಮಳಿಗೆಗಾಗಿ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ವಾಗತ ಸಮಿತಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕಲಬುರಗಿ ಇಲ್ಲಿ ನೋಂದಾಯಿಸಬೇಕು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ, ಡಿಸೆಂಬರ್ 12 ರಿಂದ ಜನವರಿ 14 ರವರೆಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಳಿಗೆಗಾಗಿ ನೋಂದಾಯಿಸಿಕೊಳ್ಳುವವರು ಅಧ್ಯಕ್ಷರು, ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಕಲಬುರಗಿ ಇಲ್ಲಿಗೆ ಡಿಡಿ ತೆಗೆದು ಕಳುಹಿಸಬೇಕು ಅಥವಾ ನಗದನ್ನು ಖುದ್ದಾಗಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭವನ, ಸರದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಕಲಬುರಗಿ ಇಲ್ಲಿಗೆ ಸಲ್ಲಿಸಬಹುದು. ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ, 2 ಕುರ್ಚಿಗಳು, 3 ಬೆಂಚುಗಳನ್ನು ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-277411, 9448577411, 9900838003 ಸಂಪರ್ಕಿಸಬಹುದೆಂದು ಪಿ. ಮಲ್ಲಿಕಾರ್ಜುನಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ಗೌರವ ಕೋಶಾಧ್ಯಕ್ಷರ ಪ್ರಕಟಣೆ ತಿಳಿಸಿದೆ.