(ನ್ಯೂಸ್ ಕಡಬ) newskadaba.com, ಕಡಬ, ಡಿ.14 ನೂತನ ಕಡಬ ತಾಲೂಕು ಸಮಸ್ತ ಸುನ್ನೀ ಮಹಲ್ ಪೆಡರೇಶನ್ ಸಮಿತಿ ರಚಿಸಿ ಡಿ 13ರಂದು ಪದಾಧಿಕಾರಿಗಳನ್ನು ಹಾಗು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮಂಗಳೂರು ಖಾಝೀ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ನೂತನ ಸಮತಿಯನ್ನು ರಚಿಸಿ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುವಂತೆ ಆಶಿರ್ವದಿಸಿದರು. ಕಡಬ ರಹಮ್ಮಾನಿಯ ಟೌನ್ ಜುಮ್ಮಾ ಮಸೀದಿಯ ಮುದರ್ರಿಸ್ ಹಾಜೀ ಪಿ.ಎಮ್ ಇಬ್ರಾಹಿಂ ದಾರಿಮೀ ಉದ್ಘಾಟಿಸಿದರು. ಅಡ್ ರೆಂಜಿಲಾಡಿ ಹುಸೈನ್ ದಾರಿಮಿ ಮಾತನಾಡಿ ಸಂಘಟಾತ್ಮಕವಾಗಿ ದೀನೀ ಪ್ರವರ್ತಣೆ ಗೈವ ಮೂಲಕ ಎಲ್ಲರ ಅಬಿವೃದ್ದಿಗೆ ಶ್ರಮಿಸುವಂತಾಗಲಿ ಎಂದು ಶುಭಹಾರೈಸಿದರು. ಸಮಸ್ತ ಸುನ್ನೀ ಮಹಲ್ಲಾ ಪೆಡರೇಶನ್ ಜಿಲ್ಲಾ ಉಪಾಧ್ಯಕ್ಷ ಹಾಜೀ ಎಸ್.ಅಬ್ದುಲ್ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಸಂಘಟಣೆಯ ಅಗತ್ಯತೆಯ ಬಗ್ಗೆ ವಿವರಿಸಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ಹನೀಪ್ ಹಾಜೀ, ಎಸ್.ಎಮ್.ಎಫ಼್ ಜಿಲ್ಲಾ ಕೋಶಾಧಿಕಾರಿ ರಝಾಖ್ ಹಾಜೀ, ಜಿಲ್ಲಾ ಸಮಸ್ತ ಮದರಸ ಮೆನೇಜ್ ಮೆಂಟ್ ಸೆಕ್ರೆಟರಿ ಹಾಜೀ ಎಸ್.ಎಮ್ ರಫೀಖ್, ಮಂಗಳೂರು ರೇಂಜ್ ಮೇನೇಜ್ ಮೆಂಟ್ ಪ್ರೆಸಿಡೆಂಟ್ ರೀಯಾಝ್, ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಝಾಖ್ ಹೇಂತಾರ್, ಜಿಲ್ಲಾ ಪ್ರಮುಖರಾದ ಪಕ್ರುದ್ದೀನ್ ಹಾಜೀ, ಹಖ್ಖೀಮ್ ಪರ್ತಿಪ್ಪಾಡಿ, ಅಬ್ದುಲ್ ರಹಮ್ಮಾನ್ ದಾರಿಮೀ, ಮೇನೇಜ್ ಮೆಂಟ್ ಕಮಿಟಿಯ ಹಾಜೀ ಕೆ.ಪಿ.ಎಮ್ ಶೆರೀಫ್ ಪೈಝೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ತಾಲುಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ ವಂದಿಸಿದರು. ಕಡಬ ತಾಲೂಕು ಮೊಹಲ್ಲಾಕ್ಕೆ ಸಂಭಂದಿಸಿದ 17 ಜಮಾತಿನ ಖತೀಬರು ಅಧ್ಯಕ್ಷರು, ಕಾರ್ಯದರ್ಶಿ ಪದಾಧಿಕಾರಿಗಳು ಉಪಸ್ಥಿತರಿದ್ದರು.