ಸಂಜೆ ಡಿಪ್ಲೋಮಾ ಪ್ರವೇಶ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13  2019-20ನೇ ಸಾಲಿಗೆ 2 ವರ್ಷಗಳ ಐಟಿಐ/ ದ್ವಿತೀಯ ಪಿ.ಯು.ಸಿ (ವಿಜ್ಞಾನ)/ ದ್ವಿತೀಯ ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾಗೆ ಲ್ಯಾಟರಲ್ ಎಂಟ್ರಿ ಸ್ಕೀಂ  ಮುಖಾಂತರ ಸಂಜೆ ಡಿಪ್ಲೋಮಾಗೆ ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಗೆ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಡಿಸೆಂಬರ್ 28 ರ ಒಳಗೆ ಅರ್ಜಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು, ಭರ್ತಿಮಾಡಿದ ಅರ್ಜಿಯನ್ನು  ಅರ್ಜಿಶುಲ್ಕ ಮತ್ತು ಸಂಬಂಧಪಟ್ಟ ಮೂಲ ದಾಖಲೆಗಳೊಂದಿಗೆ ಡಿಸೆಂಬರ್ 28 ರಂದು ಸಂಜೆ 5 ಗಂಟೆಯೊಳಗೆ ಸ್ಪೆಷಲ್ ಆಫೀಸರ್, ಕರ್ನಾಟಕ (ಸರ್ಕಾರಿ) ಸಂಜೆ ಪಾಲಿಟೆಕ್ನಿಕ್, ಮಂಗಳೂರು ಇವರಿಗೆ ಸಲ್ಲಿಸಬೇಕು.

Also Read  ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ತರಕಾರಿ ಟೆಂಪೋ

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಕಚೇರಿ ದೂರವಾಣಿ ಸಂಖ್ಯೆ: 0824-2211636 ನ್ನು ಸಂಪರ್ಕಿಸಲು  ಸ್ಪೆಷಲ್ ಆಫೀಸರ್, ಕರ್ನಾಟಕ ಸರ್ಕಾರಿ (ಸಂಜೆ) ಪಾಲಿಟೆಕ್ನಿಕ್ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top