ಮಂಗಳೂರು ವಿ.ವಿ 38ನೇ ವಾರ್ಷಿಕ ಘಟಿಕೋತ್ಸವ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ಮಂಗಳೂರು ವಿಶ್ವ ವಿದ್ಯಾನಿಲಯದ 38ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು 2020ನೇ ಜನವರಿ ತಿಂಗಳಿನಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ. ಮಂಗಳೂರು ವಿವಿ ಯ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ 2019ನೇ ಅಕ್ಟೋಬರ್ 31 ರ ಒಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು ಈ ಘಟಿಕೋತ್ಸವದಂದು ಪದವಿ ಪಡೆಯಲು ಅರ್ಹರಾಗಿರುತ್ತಾರೆ.

ಎಲ್ಲಾ ಸ್ನಾತ್ತಕೋತ್ತರ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಡಾಕ್ಟರೇಟ್ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಸ್ನಾತ್ತಕೋತ್ತರ ಮತ್ತು ಪದವಿ ಮಟ್ಟದಲ್ಲಿ ಪದಕ/ಬಹುಮಾನ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಪದವಿ ಮಟ್ಟದೆಲ್ಲಾ ನಿಕಾಯಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳು, ಮಂಗಳೂರು ವಿವಿಯ ಸ್ವಾಯತ್ತ ಕಾಲೇಜುಗಳಲ್ಲಿ ವಿಶ್ವವಿದ್ಯಾನಿಲಯದ ಪರೀಕ್ಷಾ ವಿನಿಮಯದ ಪ್ರಕಾರ ವ್ಯಾಸಂಗ ಮಾಡಿ ಸ್ನಾತ್ತಕೋತ್ತರ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಹಾಗೂ ಪದವಿ ಮಟ್ಟದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳು  ಘಟಿಕೋತ್ಸವಕ್ಕೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

ಸಾಮಾನ್ಯ ವರ್ಗದ ಪದವಿ ಪಡೆಯುವ ವಿದ್ಯಾರ್ಥಿಗಳ ಶುಲ್ಕದ ವಿವರ ಹೀಗಿದೆ ಪದವಿ ಮಟ್ಟ – ರೂ. 880, ಸ್ನಾತ್ತಕೋತ್ತರ ಪದವಿ- ರೂ.1,110, ಪಿಎಚ್‍ಡಿ/ಎಂ.ಫಿಲ್-ರೂ. 2,160, ಡಿ.ಎಸ್ಸಿ/ಡಿ.ಲಿಟ್-ರೂ. 3,310. ಪ.ಜಾತಿ/ಪ.ಪಂಗಡದ ಪದವಿ ಪಡೆಯುವ ಅಭ್ಯರ್ಥಿಗಳ ಶುಲ್ಕದ ವಿವರ :  ಪದವಿ ಮಟ್ಟ – ರೂ. 500, ಸ್ನಾತ್ತಕೋತ್ತ ಪದವಿ-ರೂ. 615, ಪಿಎಚ್‍ಡಿ/ಎಂ.ಫಿಲ್- ರೂ. 1,140, ಡಿ.ಎಸ್ಸಿ/ಡಿ.ಲಿಟ್- ರೂ.1.715. ಶುಲ್ಕವನ್ನು ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳ ಮುಖಾಂತರ ವಿಶ್ವವಿದ್ಯಾನಿಲಯದ ನಿಧಿಗೆ ಜಮೆಯಾಗುವಂತೆ ಡಿ.ಡಿ/ಚಲನ್ ಮೂಲಕ ಪಾವತಿಸಬಹುದು, ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳು ದೃಡೀಕರಿಸಿದ ಜಾತಿ ಪ್ರಮಾಣ ಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಬೇಕು. ಪಿಎಚ್‍ಡಿ/ ಡಿ.ಎಸ್ಸಿ/ಡಿ.ಲಿಟ್ ಪದವಿಯನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ 2020ನೇ ಜನವರಿ 5 ಒಳಗೆ ಕಳುಹಿಸಿಕೊಡಬೇಕು ಎಂದು  ಕುಲಸಚಿವರು(ಪರೀಕ್ಷಾಂಗ) ಮಂಗಳೂರು ವಿವಿ ಮಂಗಳಗಂಗೋತ್ರಿ ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group