(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13 ಸುಳ್ಯ ತಾಲೂಕಿನ ಅಲೆಟ್ಟಿ, ಕೊಲ್ಚಾರು, ಕಣಕ್ಕೂರು, ಬಂದ್ಯಡ್ಕ ರಸ್ತೆ ಕಿ.ಮೀ 2.60 ರಲ್ಲಿ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗಿರುತ್ತದೆ. ಇದರಿಂದಾಗಿ ಹಾಲಿ ಸೇತುವೆಯ ಎರಡೂ ಬದಿ ತೆಂಗು ಅಡಿಕೆ ತೋಟವಿದ್ದು, ಬದಲೀ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸಲು ಡಿಸೆಂಬರ್ 18 ರಿಂದ 31 ರವರೆಗೆ ಈ ಭಾಗದ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಿ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಯಶವಂತ ಕುಮಾರ್ ಆದೇಶಿದ್ದಾರೆ.
ಬಂದ್ಯಡ್ಕ ಮಾರ್ಗದಿಂದ ಸುಳ್ಯಕ್ಕೆ ಸಂಚರಿಸುವ ವಾಹನಗಳು ಕೊಲ್ಲರಮೂಲೆ, ಕರ್ಲಪ್ಪಾಡಿ ದ್ವಾರ, ಕಾಂತಮಂಗಲ ಸೇತುವೆ ಮೂಲಕ ಹಾಗೂ ಸುಳ್ಯ ಮಾರ್ಗದಿಂದ ಬಂದ್ಯಡ್ಕಕ್ಕೆ ಸಂಚರಿಸುವ ವಾಹನಗಳು ಕಾಂತಮಂಗಲ ಸೇತುವೆ, ಕರ್ಲಪ್ಪಾಡಿ ದ್ವಾರ, ಕೊಲ್ಲರಮೂಲೆ ಮೂಲಕ ಬಂದ್ಯಡ್ಕಕ್ಕೆ ಸಂಚರಿಸಲು ಬದಲಿ ಮಾರ್ಗವನ್ನಾಗಿ ಉಪಯೋಗಿಸಲು ಪ್ರಕಟಣೆ ತಿಳಿಸಿದೆ.