ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.12  ಕುಂತೂರು ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನವನ್ನು ಮಾನವ ಹಕ್ಕುಗಳ ಸಂಘದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ/ಫಾ/ಡಾ/ ಎಲ್ದೋ ಪುತ್ತನ್‍ಕಂಡತ್ತಿಲ್ ಅವರು ಮಾನವ ಹಕ್ಕುಗಳ ಮಹತ್ವ ಮತ್ತು ಪ್ರಸ್ತುತತೆಯನ್ನು ಪ್ರಶಿಕ್ಷಣಾರ್ಥಿಗಳಿಗೆ ವಿವರಿಸಿದರು.

ಮಾನವ ಹಕ್ಕುಗಳ ಸಂಘದ ಸಂಯೋಜಕ ಉಪನ್ಯಾಸರಾದ ಶ್ರೀ ಅಜಿತ್ ಕಾಮತ್‍ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಿಕ್ಷಣಾರ್ಥಿಗಳಾದ ಸಂಧ್ಯಾ ಕೆ.ಕೆ ಮತ್ತು ಸಿರಜುನ್ನಿಶ ಅವರು ಮಾನವ ಹಕ್ಕುಗಳ ದಿನದ ಕುರಿತು ಮಾತನಾಡಿದರು ಹಾಗೂ ಶೋಭಿತಾ ಅವರು ಪಿಪಿಟಿ ಪ್ರದರ್ಶನದ ಮೂಲಕ ಮಾನವ ಹಕ್ಕುಗಳ ಬಗ್ಗೆ ಸವಿವರವಾಗಿ ತಿಳಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಭುವನಾ ಶಿವರಾಮ್, ಸವಿತಾ, ಶೋಭಿತಾ, ಮಮತ, ಜಯಲಕ್ಷ್ಮಿ, ಸುಜನ ಕುಮಾರಿ ಮತ್ತು ಅಮೃತವಾಣಿ ಇವರು ಕಿರು ರೂಪಕದ ಮೂಲಕ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಪ್ರದರ್ಶನವನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್ ಹಾಗೂ ಶಿಕ್ಷಕ ವರ್ಗದವರು ಉಪಸ್ಧಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಸವಿತಾ ಸ್ವಾಗತಿಸಿ, ನಿಷಾ ಪಿ.ಡಿ ವಂದನಾರ್ಪಣೆಗೈದರು. ಶ್ವೇತ ಕುಮಾರಿ ಹಾಗೂ ಸಿರಜುನ್ನಿಶ ಕಾರ್ಯಕ್ರಮ ನಿರೂಪಿಸಿದರು.

Also Read  ಮಂಗಳೂರು: ಪತ್ರಕರ್ತ, ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು ನಿಧನ

error: Content is protected !!
Scroll to Top