ಹಿಂದಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.12  ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ, ಲಾಲ್‍ಭಾಗ್‍ ಇಲ್ಲಿ  ಬುಧವಾರದಂದು ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಮಂಗಳೂರು ಕಾರ್ಪೊರೇಶನ್ ಬ್ಯಾಂಕಿನ ಉಪಮಹಾ ಪ್ರಬಂಧಕ ಶ್ರೀ ಜಗನ್ನಾಥ ಶೆಟ್ಟಿ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

“ಭಾಷಾಕಲಿಕೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರು ಮಹತ್ತರ ಪಾತ್ರವಹಿಸುತ್ತಾರೆ. ಶಿಕ್ಷಕರು ತಪ್ಪು ವ್ಯಾಕರಣ ಕಲಿಸಿದರೆ ಮುಂದೆ ಅದೇ ತಪ್ಪು ವಿದ್ಯಾರ್ಥಿಗಳಲ್ಲಿ ಮುಂದುವರಿಯುತ್ತದೆ. ಆದ್ದರಿಂದ ಪ್ರತೀಯೊಬ್ಬ ಶಿಕ್ಷಕನೂ ಭಾಷೆಯ ಮೇಲೆ ಪೂರ್ಣ ಒಡೆತನ ಸಾಧಿಸುವ ಅನಿವಾರ್ಯತೆ ಇದೆ ಎಂದು ಅವರು ಶಿಕ್ಷಕರನ್ನು ಉದ್ದೇಶಿಸಿ ಹೇಳಿದರು. ಕಾರ್ಪೊರೇಶನ್ ಬ್ಯಾಂಕಿನ ನಿವೃತ್ತ ವರಿಷ್ಠ ಪ್ರಬಂಧಕರಾದ ಡಾ| ಸರಸ್ವತಿ ಹಾಗೂ ಸಾಗರದ ಹಿಂದಿ ಶಿಕ್ಷಕ ಶ್ರೀ ಡಿ.ಆರ್ ಶಿವಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸುಮಾರು 50ಕ್ಕೂ ಮಿಕ್ಕಿ ಶಿಕ್ಷಕರು ಭಾಗವಹಿಸಿದ ಈ ಅಭ್ಯಾಸ ವರ್ಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಪ್ರಾದೇಶಿಕ ಹಿಂದಿ ಸಮಿತಿಯ ಅಧ್ಯಕ್ಷರಾದ ರಾಮ್‍ಮೋಹನ್‍ ರಾವ್‍ ವಹಿಸಿದ್ದರು. ಆರಂಭದಲ್ಲಿ ಹಿಂದಿ ಪ್ರಚಾರ ಸಮಿತಿಯ ಕಾರ್ಯದರ್ಶಿ ರತ್ನಾ ವತಿಜೆ. ಬೈಕಾಡಿ ಸ್ವಾಗತಿಸಿ, ಸದಸ್ಯರಾದ ಚಿದಾನಂದ ವಂದಿಸಿದರು. ಡಿ.ಆರ್. ಶಿವಶಂಕರ, ಕುಸುಮಾ ಕೆ.ಆರ್, ಡಾ.ಪಿ.ವಿ ಶೋಭಾ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಪೊಪೆಟ್‍ಗಳ ಮುಖೇನ ಕಥೆಗಳನ್ನು ಹೇಳುವ ವಿಧಾನವನ್ನು ಸಿ.ಆರ್.ಪಿ ಕುಸುಮಾ ಕೆ.ಆರ್ ತಿಳಿಸಿಕೊಟ್ಟರು. ಹಿಂದಿ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಪ್ರೊ. ಶ್ರೀಧರ ಭಟ್ ಹಾಗೂ ಡಾ| ಮುರಳೀಧರ ನಾೈಕ್‍ ಇವರ ಮಾರ್ಗದರ್ಶನದಲ್ಲಿ ಇಡೀ ದಿನದ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.

Also Read  ಕೆಮಿಕಲ್ ಇಂಜಿನಿಯರಿಂಗ್ ವಿಭಾಗ ➤ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!
Scroll to Top