ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ರಮೇಶ ಕೆ ರವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.12  ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಅನ್ವಯಿಕೆ ಹೊಂದಿರುವ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ರಾಜ್ಯ ವಿಶ್ವವಿದ್ಯಾಲ ಸಿಂಡಿಕೇಟ್ ಪ್ರಾಧಿಕಾರಿಗಳಿಗೆ ಅದೇ ಅಧಿನಿಯಮದ ಪ್ರಕಾರ 28(1)ರನ್ವಯ 39(1)ರ ಉಪಬಂಧಕ್ಕೊಳಪಟ್ಟು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ರಮೇಶ ಕೆ.ಯವರನ್ನು ಈ ಕೂಡಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

ಮಂಗಳೂರು ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಪದವಿಯನ್ನು ಪಡೆದಿರುತ್ತಾರೆ. 2001ರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿರುತ್ತಾರೆ. ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ, ಎಬಿವಿಪಿಯ ವಿವಿಧ ಶೈಕ್ಷಣಿಕ ವಿಷಯಗಳ ಹೋರಾಟದ ನೇತೃತ್ವವಹಿಸಿರುತ್ತಾರೆ. ಮಂಗಳೂರು ಇನೀಷಿಯೇಟಿವ್ ಫಾರ್ ನ್ಯಾಶನಲಿಸ್ಟಿಕ್ ಡೈಲಾಗ್‍ನ (MIND) ಸಂಚಾಲಕರಾಗಿ, ನ್ಯಾಶನಲ್ ಯುವ ಕೋ-ಓಪರೇಟಿವ್ ಸೊಸೈಟಿಯ ಕರ್ನಾಟಕದ ಸಂಚಾಲಕರಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶಕ್ತಿನಗರದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ನ ಪ್ರಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Also Read  ➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ಡಿಸೆಂಬರ್ 01)

error: Content is protected !!
Scroll to Top