ಕಡಬ: ಬೈಕ್ ಮತ್ತು ಮಾರುತಿ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com, ಕಡಬ, ಡಿ.11  ಬೈಕ್ ಮತ್ತು ಮಾರುತಿ ನಡುವೆ ಡಿಕ್ಕಿ ಸಂಭವಿಸಿ ವಾಹನಗಳು ಜಖಂಗೊಂಡು ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಕಡಬ ತಾಲೂಕು ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ನಿನ್ನೆ ನಡೆದಿದೆ.

ಮೋಟಾರ್ ಸೈಕಲ್ ಸವಾರ ಗಣೇಶ್ ಎಂಬವರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಸವಾರನು ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿನ ಬೆರಳುಗಳಿಗೆ ಗಾಯವಾಗಿದೆ. ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ 108 ನೇ ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ಜಿಲ್ಲಾ ಪಂಚಾಯತ್ ಮಂಗಳೂರು ➤ ಗುತ್ತಿಗೆ ಆಧಾರದಲ್ಲಿ ವಾಹನಗಳ ಟೆಂಡರ್ ಆಹ್ವಾನ

error: Content is protected !!
Scroll to Top