ಮೀನುಗಾರಿಕೆ : ಮೀನಿನ ಕನಿಷ್ಟ ಗಾತ್ರ ನಿಗದಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.11  ಮೀನುಗಾರಿಕೆಯಲ್ಲಿ ದೊರೆತ ಸಣ್ಣ ಮೀನುಗಳನ್ನು ಫಿಶ್ ಮೀಲ್ ಪ್ಲಾಂಟ್ / ಸುರುಮಿ ಘಟಕಗಳಿಗೆ ಕಚ್ಛಾ ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಸಣ್ಣ ಮೀನುಗಳನ್ನು ಹಿಡಿಯುವುದರಿಂದ, ಮುಂದೆ ಮೀನಿನ ಸಂಪತ್ತು ಹೆಚ್ಚಳಕ್ಕೆ ತೊಂದರೆಯಾಗಿ ಮೀನಿನ ಉತ್ಪಾದನೆಯು ಸಹ ಕಡಿಮೆಯಾಗುವುದು ಎನ್ನುವ ಹಿನ್ನೆಲೆಯಲ್ಲಿ ಮೀನಿನ ಕನಿಷ್ಟ ಕಾನೂನಾತ್ಮಕ ಗಾತ್ರವನ್ನು ಸರ್ಕಾರ ನಿಗದಿಗೊಳಿಸಿದೆ.


ನಿಗದಿಗೊಳಿಸಲಾದ ಮೀನಿನ ಕನಿಷ್ಟ ಕಾನೂನಾತ್ಮಕ ಗಾತ್ರದ ವಿವರ : ಬೂತಾಯಿ-10.0 ಸೆಂಟಿ ಮೀಟರ್, ಬಂಗುಡೆ-14.0 ಸೆಂಟಿ ಮೀಟರ್, ಪಾಂಬೊಲ್-46.0 ಸೆಂಟಿ ಮೀಟರ್,, ಅಂಜಲ್-50.0 ಸೆಂಟಿ ಮೀಟರ್,, ಕೊಲ್ಲತರು-7.0 ಸೆಂಟಿ ಮೀಟರ್, ಕಪ್ಪು ಮಾಂಜಿ-17.0 ಸೆಂಟಿ ಮೀಟರ್, ಕೇದಾರ್-31.0 ಸೆಂಟಿ ಮೀಟರ್, ಕಾಣೆ-11.3 ಸೆಂಟಿ ಮೀಟರ್, ಬೊಳೆಂಜಿರ್-8.9 ಸೆಂಟಿ ಮೀಟರ್, ಮದ್ಮಲ್-12.0 ಸೆಂಟಿ ಮೀಟರ್, ಡಿಸ್ಕೋ-17.0 ಸೆಂಟಿ ಮೀಟರ್, ಅಡೆ ಮೀನು-10.0 ಸೆಂಟಿ ಮೀಟರ್,, ನಂಗು-9.0 ಸೆಂಟಿ ಮೀಟರ್, ಬಿಳಿ ಮಾಂಜಿ-13.0 ಸೆಂಟಿ ಮೀಟರ್, ಮುರು ಮೀನು-18.0 ಸೆಂಟಿ ಮೀಟರ್, ಕಲ್ಲೂರು-15.0 ಸೆಂಟಿ ಮೀಟರ್, ಕೊಡ್ಡಾಯಿ-17.0 ಸೆಂಟಿ ಮೀಟರ್, ಕೋಲುಬಂಡಾಸ್-ಸೆಂಟಿ ಮೀಟರ್, ಡಿಎಮ್‍ಎಲ್, ಕಪ್ಪೆ ಬಂಡಾಸ್-11.0 ಸೆಂಟಿ ಮೀಟರ್,
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಮೀನುಗಾರರಿಗೆ ತಿಳಿಸಲಾಗಿದೆ ತಪ್ಪಿದಲ್ಲಿ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬ: ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಶುಭಾರಂಭ

error: Content is protected !!
Scroll to Top