ವಿಕಲಚೇತನರ ವಿಶೇಷ ಬಸ್ ಪಾಸ್- ನವೀಕರಣಕ್ಕೆ ಅರ್ಜಿ

 

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.10   ಕರಾರಸಾ.ಸಂಸ್ಥೆಯು ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸುತ್ತಿದ್ದು, 2019ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ಸು ಪಾಸುಗಳ ಅವಧಿಯು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ. 2020ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು ಜನವರಿ 1, 2020 ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಹೊಸ ಪಾಸುಗಳನ್ನು ನೀಡಲಾಗುವುದು. ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2019ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಫೆಬ್ರವರಿ 29 ರವರೆಗೆ ಮಾನ್ಯತೆ ಮಾಡಲಾಗುತ್ತದೆ.


ನವೀಕರಣದ ಬಗ್ಗೆ ಮಾಹಿತಿ: ಹಳೆಯ ಪಾಸು ಕಾರ್ಡನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕು, ರೂ.660/-ನ್ನು ನಗದು ರೂಪದಲ್ಲಿ ನೀಡಬೇಕು, 1 ಸ್ಟ್ಯಾಂಪ್ ಮತ್ತು 2 ಪಾಸ್ ಪೋರ್ಟ್ ಸೈಜಿನ ಫೋಟೋ, ಗುರುತಿನ ಚೀಟಿನ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿ ಅಥವಾ ವಿಕಲಚೇತನ ವ್ಯಕ್ತಿಗಳಿಗೆ ಹೊಸದಾಗಿ ನೀಡಲಾಗಿರುವ  ಕಾರ್ಡಿನ ಮೂಲಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿಯನ್ನು ತರಬೇಕು, ವಿಳಾಸದ ದೃಢೀಕರಣ ದಾಖಲಾತಿ(ಆಧಾರ್ ಕಾರ್ಡ್) ಮೂಲಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿಯನ್ನು ತರಬೇಕು, ಪಾಸುಗಳನ್ನು ನವೀಕರಿಸಲು ಕೊನೆಯ ದಿನಾಂಕದ ನಂತರ ನವೀಕರಿಸಲು ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾಸಂ, ಮಂಗಳೂರು ಇವರು ತಿಳಿಸಿದೆ.

Also Read  ಲಕ್ನೋ : ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಕಾಮುಕರ ಅಟ್ಟಹಾಸ.!!

error: Content is protected !!
Scroll to Top