ನೂಜಿಬಾಳ್ತಿಲ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

(ನ್ಯೂಸ್ ಕಡಬ) newskadaba.com ಕಡಬ, ಆ .22, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ, ನೂಜಿಬಾಳ್ತಿಲ ಶಾಲಾಭಿವೃದ್ದಿ ಸಮಿತಿ, ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2017-18 ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲೆಯಲ್ಲಿ ಸೋಮವಾರ ನಡೆಯಿತು.

ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ದೀಪ ಪ್ರಜ್ವಲನಗೊಳಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಇಂದು ಇಲ್ಲಿ ಬೆಳಗಿಸಿದ ಜ್ಯೋತಿಯಂತೆ ಈ ಕ್ಲಸ್ಟರ್ ಮಟ್ಟದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಬೆಳಕಾಗಲಿ ಎಂದು ಶುಭಹಾರೈಸಿದರು.

ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಶಾಲಾ ವಿವಿಧ ಕೊಠಡಿಗಳಲ್ಲಿ ನಡೆಯುತ್ತಿರುವ ಪ್ರತಿಭಾ ಸ್ಪರ್ಧೆಗಳನ್ನು ಡೋಲು ಭಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪ್ರತಿಪಾದಿಸುವ ಇಂತಹ ಕ್ಲಸ್ಟರ್ ಮಟ್ಟದ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಹೊಸ ಹುರುಪಿನೊಂದಿಗೆ ತಮ್ಮ ಪ್ರತಿಭೆಗಳಿಂದ ಯಶಸ್ಸಿನ ಕಡೆಗೆ ಸಾಗಲು ದಾರಿ ದೀಪವಾಗುತ್ತಿದೆ. ಹಲವು ವರ್ಷಗಳ ಹಿಂದೆ ವಿದ್ಯೆ ಕಲಿತಂತಹಾ ನಮಗೆ ಇಂತಹ ಪ್ರತಿಭೆಗಳು, ಪ್ರತಿಭಾ ಕಾರಂಜಿಗಳು ಇರಲಿಲ್ಲ. ನಾವು ಬರೇ ಮನೆಯಿಂದ ಶಾಲೆಗೆ ಶಾಲೆಯಿಂದ ಮನೆಗೆ ಹೋಗಿ ಕಲಿತು ಈ ಮಟ್ಟಕ್ಕೆ ತಲುಪಿದ್ದೇವೆ. ಆದರೆ ಇಂದು ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಬಿಸಿಯೂಟ, ಸಮವಸ್ತ್ರ, ಶೂಟುಬೂಟು ನೀಡುವುದರೊಂದಿಗೆ ಸ್ಕಾಲರ್ ಶಿಪ್ಗಳನ್ನು ನೀಡುತ್ತಿದ್ದು ಯಾವುದೇ ಕಾರಣಕ್ಕೂ ಬಡವ ಶ್ರೀಮಂತನೆಂಬ ಭೇದವಿಲ್ಲದೆ ಎಲ್ಲಾ ಮಕ್ಕಳು ವಿದ್ಯಾಭ್ಯಾಸ ಕಲಿತು ಸಮಾಜದ ಮುಖ್ಯ ವಾಹಿನಿಗೆ ಬರುವುದಲ್ಲದೆ ಜಾತ್ಯಾತೀತ ನಿಲುವಿನೊಂದಿಗೆ ಸಮಾಜ ಕಟ್ಟುವ ಕೆಲಸ ಮಾಡಲು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

Also Read  ನಟ ದರ್ಶನ್ ಸೆಲ್ ಗೆ ಟಿವಿ ಅಳವಡಿಕೆ

ಅಧ್ಯಕ್ಷತೆ ವಹಿಸಿ ಮಾತನಾಡಿದ ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಕ್ಕಳಲ್ಲಿ ಅಡಕವಾಗಿರುವ ಹಲವಾರು ಪ್ರತಿಭೆಗಳನ್ನು ಇಂತಹ ಸಾರ್ವಜನಿಕರ ಮುಂದೆ ಹೊರಹಾಕುವುದರ ಮೂಲಕ ತಮ್ಮ ಪ್ರತಿಭೆಗಳನ್ನು ಪಸರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಮಕ್ಕಳ ವರ್ಚಸ್ಸು ನಿಂತ ನೀರಾಗದೆ ಹರಿಯುವ ನೀರಾಗಿ ಜಗತ್ತಿಗೆ ಮಾದರಿ ಜೀವನ ನಡೆಸುವ ವಿದ್ಯಾರ್ಥಿಗಳಾಗಬೇಕೆಂದು ಹೇಳಿದ ಅವರು ಈ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೆ ನಮ್ಮ ಗ್ರಾ.ಪಂ., ತಾ.ಪಂ., ಜಿ.ಪಂ.ನಿಂದ ಅದೇ ರೀತಿ ಶಾಲಾಭಿವೃದ್ದಿ ಸಮಿತಿಯಿಂದ ಎಲ್ಲಾ ರೀತಿಯ ಸಹಕಾರ ದೊರೆಯುತ್ತಿರುವುದು ಶ್ಲಾಘನೀಯವಾಗಿದ್ದು ನಮ್ಮ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬಳ್ಳೇರಿಯವರು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು ಈ ಭಾಗದ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಿಗೆ ದೇವಸ್ಥಾನದಿಂದ ಅನ್ನದಾನದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇದೇ ರೀತಿ ನಮ್ಮಲ್ಲಿಗೆ ಎಲ್ಲಾ ರೀತಿಯ ಸಹಕಾರ ದೊರೆಯಲಿ ಎಂದರು.

ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಬಳ್ಳೇರಿ, ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿಕ್ಷಕ ರಾಮಕರಷ್ಣ ಮಲ್ಲಾರ ಶುಭಹಾರೈಸಿದರು. ನೂಜಿಬಾಳ್ತಿಲ ಮಾಜಿ ಸಿಆರ್ಪಿ ಸುಂದರ ಗೌಡ ಪಣೆಮಜಲು, ತಾಲೂಕು ಐಆರ್ಟಿ ಸೀತಮ್ಮ , ನೂಜಿಬಾಳ್ತಿಲ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು, ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭ ಕೇಪುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಥನಿ ಪ.ಪೂ.ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ ಭಟ್, ಕಲ್ಲುಗುಡ್ಡೆ ನೂರುಲ್ ಹುದಾ ಮದ್ರಸದ ಸದರ್ ಮುಹಲ್ಲಿಂ ಅಬ್ದುಲ್ ನಾಸಿರ್ ಸಅದಿ, ಓಂತ್ರಡ್ಕ ಶಾಲಾ ಮುಖ್ಯ ಶಿಕ್ಷಕ ತುಕಾರಾಮ ಎಸ್, ಶಿಕ್ಷಕರಾದ ವಿಜಯ ಕುಮಾರ್ ಕೈಕಂಬ, ಕುಸುಮಾಧರ, ಜಿನ್ನಪ್ಪ, ಪ್ರಕಾಶ್ ಭಟ್, ಪೂವಪ್ಪ, ಸುಜಾತ, ಕಸ್ತೂರಿ, ಆನಂದ ಮೂರ್ತಿ, ರಶ್ಮಿ, ಸುಧೀರ್, ತೀರ್ಥೇಶ್, ಚಂದ್ರಶೇಖರ, ರವೀಂದ್ರ, ಭವಾನಿ, ಅಂಬಿಕಾ, ಮೋಹಿನಿ, ಕುಸುಮಾವತಿ, ಯಮುನಾ, ಬಸವರಾಜ್ , ಪ್ರೇಮಲತಾವಾಸುದೇವ, ಗೀತಾ ಮೊದಲಾದವರು ತೀರ್ಪುಗಾರರಾಗಿ ಆಗಮಿಸಿದ್ದರು. ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ, ಬದಿಬಾಗಿಲು ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ, ನೂಜಿಬಾಳ್ತಿಲ ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಗಣೇಶ್ ಭಟ್ ನಿಡ್ಡೊ, ಅಂಚೆಪಾಲಕ ಜಿನೇಂದ್ರ ಜೈನ್, ನೂಜಿಬಾಳ್ತಿಲ ಗ್ರಾ,ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ, ವಿ.ಕೆ ವರ್ಗೀಸ್ ಸರೋಳಿ, ಜಿನೇಂದ್ರ ಇಂದ್ರ ಬಸ್ತಿ, ದೇವಪ್ಪ ಬರೆಮೇಲು, ರವೀಂದ್ರ ನಿಡ್ಡೊ, ಸುಂದರಿ ಕಲ್ಲುಗುಡ್ಡೆ, ಭಾರತಿ ಪಾಲೆತ್ತಡಿ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಶೇಖರ ಎಲುವಾಲೆ, ಸುನಿತಾ, ನೀಮಾ, ಕಲ್ಯಾಣಿ, ಅನ್ನಮ್ಮ, ಯಶೋಧ ನಿಡ್ಡೊ, ಪ್ರತಿಭಾಕಾರಂಜಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ನೂಜಿಬಾಳ್ತಿಲ ಶಾಲಾ ಶಿಕ್ಷಕರಾದ ಲೂಸಿ, ಶೈಲಾ ಟಿ.ಐ, ಶ್ರೀಲತಾ, ಸಚಿದೇವಿ. ಶ್ವೇತಾ ಸಹಕರಿಸಿದರು. ನೂಜಿಬಾಳ್ತಿಲ ಸಿಆರ್ಪಿ ಗೋವಿಂದ ನಾಯ್ಕ ಸ್ವಾಗತಿಸಿ, ಶಾಲಾ ಮುಖ್ಯೋಪಧ್ಯಾಯ ಶ್ರೇಯಾಂಸ್ ವಂದಿಸಿದರು. ಶಾರೀರಿಕ ಶಿಕ್ಷಕ ಬಾಲಕೃಷ್ಣ ಎಂ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

error: Content is protected !!
Scroll to Top