ಸಮ್ಯಕ್ತ್ ಜೈನ್ ಅವರ ಮಾರ್ದನಿ ಕವನಸಂಕಲನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.10   ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಮ್ಯಕ್ತ್ ಹೆಚ್. ಜೈನ್ ಅವರ ಮಾರ್ದನಿ ಕವನಸಂಕಲನವನ್ನು ಪುತ್ತೂರಿನಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.


ಪುತ್ತೂರು ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳು ಕವನಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಇದು ಸಮ್ಯಕ್ತ್  ಜೈನ್ ಅವರ  ಮೂರನೇ ಕವನಸಂಕಲನವಾಗಿದ್ದು, ಈ ಹಿಂದೆ ಅಂಕುರ ಹಾಗೂ ಮಂಜರಿ ಎಂಬ ಕೃತಿಯನ್ನು ರಚಿಸಿ ಬಿಡುಗಡೆಗೊಳಿಸಿದ್ದರು. ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಇವರು ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗೂ ಮಂಜುಳ ದಂಪತಿಯ ಪುತ್ರ.

Also Read  ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಆಪ್‍ಡೇಟ್

 

error: Content is protected !!
Scroll to Top