(ನ್ಯೂಸ್ ಕಡಬ) newskadaba.com, ಕಡಬ, ಡಿ.9 ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ “ಕ್ರೀಡಾ ಸಂಭ್ರಮ 2019” ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯರ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಮರುವಂತಿಲ ಮಾತನಾಡಿ, ಮಾನಸಿಕ ಹಾಗೂ ದೇಹದ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಇಂತಹ ಕ್ರೀಡಾಕೂಟಗಳ ಮೂಲಕ ಸಮಾಜದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ಕೊಡುವ ಕೆಲಸ ಆಗಬೇಕು. ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪ್ಪಿನಂಗಡಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಲಹೆಗಾರ ಲಿಂಗಪ್ಪ ಗೌಡ ಕಡೆಂಬ್ಯಾಲ್ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವಿಜಯ ಬ್ಯಾಂಕ್ ಉದ್ಯೋಗಿಯಾಗಿ, ಕಬಡ್ಡಿ ಆಟಗಾರ ಸತೀಶ್ ಎ. ಕ್ರೀಡಾಕೂಟ ಉದ್ಘಾಟಿಸಿದರು. ನೋಟರಿ ನ್ಯಾಯವಾದಿ ಸುಂದರ ಗೌಡ ನೆಕ್ಕಿಲಾಡಿ, ನಿವೃತ್ತ ಮುಖ್ಯ ಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ, ವಿಜಯ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಾಲಕೃಷ್ಣ ಗೌಡ ಕತ್ಲಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ ಭವಾನಿ ಗೌಡ ಪರಂಗಾಜೆ ಮಾತನಾಡಿ ಶುಭಹಾರೈಸಿದರು. ಕೆಪಿಸಿಎಲ್ ನಿವೃತ್ತ ಜೆ.ಇ. ಮೋನಪ್ಪ ಗೌಡ ಅಗತ್ತಾಡಿ, ಪ್ರಗತಿಪರ ಕೃಷಿಕ ಮಾಯಿಲಪ್ಪ ಗೌಡ ಅಲೆಪ್ಪಾಡಿ, ಕೆಎಸ್‍ಆರ್ ಟಿಸಿ ನಿವೃತ್ತ ಸಂಚಾರ ನಿಯಂತ್ರಣಾಧಿಕಾರಿ ದೇವಪ್ಪ ಗೌಡ ಬರೆಂಬೆಟ್ಟು, ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯದ ಹಿರಿಯರ ಸಮಿತಿ ಗೌರವ ಸಲಹೆಗಾರ ಈಶ್ವರ ಗೌಡ ಪಜ್ಜಡ್ಕ, ವಲಯ ಉಸ್ತುವಾರಿ ಪದ್ಮಪ್ಪ ಗೌಡ ರಾಮಕುಂಜ ಉಪಸ್ಥಿತದಿದ್ದರು. ಆಲಂಕಾರು ವಲಯ ಒಕ್ಕಲಿ ಗೌಡ ಸೇವಾ ಸಂಘದ ಯುವ ಸಮಿತಿ ಅಧ್ಯಕ್ಷ ಚಕ್ರಪಾಣಿ ಎ.ವಿ. ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ರವಿಕುಮಾರ್ ನೆಕ್ಕಿಲಾಡಿ ವಂದಿಸಿದರು. ಯುವ ಸಮಿತಿ ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಿತು.
ಆರಂಭದಲ್ಲಿ ಆಲಂಕಾರು ವಲಯ ವ್ಯಾಪ್ತಿಯ ಆಲಂಕಾರು, ಪೆರಾಬೆ, ಕುಂತೂರು, ಹಳೆನೇರೆಂಕಿ,ರಾಮಕುಂಜ, ಕೊೈಲ ಗ್ರಾಮಗಳ ಕ್ರೀಡಾಪಟುಗಳಿದ್ದ ಗ್ರಾಮವಾರು ತಂಡದವರಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಧ್ವಜಾರೋಹಣ ನಡೆಯಿತು. ಕ್ರೀಡಾಪಟುಗಳಾದ ರಿವಾನ್, ಗೌತಮ್, ಕಿರಣ್, ಪೂಜಾ ಹಾಗೂ ಹರ್ಷಿತಾ ಅವರುಗಳು ಕ್ರೀಡಾಜ್ಯೋತಿ ಬೆಳಗಿಸಿದರು. ಯುವ ಸಮಿತಿ ಕಾರ್ಯದರ್ಶಿ ರಾಮಣ್ಣ ಗೌಡ ದೋಳಿ ಪ್ರತಿಜ್ಞಾ ವಿಧಿ ಬೋಧಿಸಿದರು.