ಬೀದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿಗೆ ಚುಣಾವಣೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.9   ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ನಿಯಮಗಳು 2019ರನ್ವಯ ಪಟ್ಟಣ ವ್ಯಾಪಾರ ಸಮಿತಿಗೆ ಬೀದಿ ಬದಿ ವ್ಯಾಪಾರಗಳಲ್ಲಿ ತೊಡಗಿರುವ 10 ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಡಿಸೆಂಬರ್ 21 ರಂದು ಚುನಾವಣೆ ನಡೆಯಲಿದೆ.


ನಾಮಪತ್ರಗಳನ್ನು ಸಲ್ಲಿಸಲು ನಿಗಧಿಪಡಿಸಿದ ಅವಧಿ ಡಿಸೆಂಬರ್ 9 ರಿಂದ 13 ರವರೆಗೆ ಬೆಳಿಗ್ಗೆ ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ, ನಾಮಪತ್ರಗಳನ್ನು ಪರಿಶೀಲಿಸುವ ದಿನ ಡಿಸೆಂಬರ್ 14 ರಂದು ಬೆಳಿಗ್ಗೆ 11 ಗಂಟೆ, ಸಿಂಧುವಾದ ನಾಮಪತ್ರಗಳನ್ನು ಪ್ರಕಟಿಸಬೇಕಾದ ದಿನ ಡಿಸೆಂಬರ್ 14 ಮಧ್ಯಾಹ್ನ 3 ಗಂಟೆ, ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಡಿಸೆಂಬರ್ 15 ಸಂಜೆ 5 ಗಂಟೆಯೊಳಗೆ, ಮತದಾನ ನಡೆಸುವ ದಿನ ಡಿಸೆಂಬರ್ 21 ರಂದು.

Also Read  ಮಂಗಳೂರು: ಗಾಂಜಾ ದಂಧೆ ಪ್ರಕರಣ    ➤ ಬಂಧಿತ ವೈದ್ಯರು & ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು

ದ.ಕ ಜಿಲ್ಲೆಯಲ್ಲಿನ ಚುನಾವಣಾ ನಡೆಯವ ಸ್ಥಳಗಳು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನಗರ ಬಡತನ ನಿರ್ಮೂಲನಾ ಕೋಶ, ಮಹಾನಗರಪಾಲಿಕೆ ಕಟ್ಟಡ, ಎಮ್.ಜಿ. ರೋಡ್, ಲಾಲ್ ಬಾಗ್ ಮಂಗಳೂರು, ಬಂಟ್ವಾಳ ಪುರಸಭೆ ವ್ಯಾಪ್ತಿಯ ಲಯನ್ಸ್ ಕ್ಲಬ್ ಕಟ್ಟಡ, ಬಿ.ಸಿ ರೋಡ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಮಾದರಿ ಸಾಲೆ ಬೆಳ್ತಂಗಡಿ, ಮೂಡಬಿದ್ರೆ ಪುರಸಭೆ ವ್ಯಾಪ್ತಿಯ ಸಮುದಾಯ ಭವನ ಜ್ಯೋತಿ ನಗರ ಮೂಡಬಿದ್ರೆ, ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಸಮುದಾಯ ಭವನ ಮುಲ್ಕಿ, ನಗರಸಭೆ ಪುತ್ತೂರು ವ್ಯಾಪ್ತಿಯ ಸಮುದಾಯ ಭವನ ಪುತ್ತೂರು, ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಸಮುದಾಯ ಭವನ ಸುಳ್ಯ, ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸಮುದಾಯ ಭವನ ಉಳ್ಳಾಲ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ದ.ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಿಟ್ಲ, ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಟೆಕಾರ್ ಸಭಾಭವನ, ಕೋಟೆಕಾರ್ ಪಟ್ಟಣ ಪಂಚಾಯತ್ ಕಚೇರಿ ಆವರಣ, ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪುರಸಭೆ ಸಭಾಂಗಣ, ಸೋಮೇಶ್ವರದಲ್ಲಿ ನಡೆಸಲಾಗುವುದು ಎಂದು ನೋಡಲ್ ಅಧಿಕಾರಿ, ಪಟ್ಟಣ ವ್ಯಾಪಾರ ಸಮಿತಿ, ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು ಕೊರೊನಾಘತಾ 16ನೇ ಬಲಿ

error: Content is protected !!
Scroll to Top