ಮಹಿಳೆ ಜೊತೆ ಅನೈತಿಕ ಸಂಬಂಧ ► ಕುತ್ತಿಗೆಗೆ ಹಗ್ಗ ಬಿಗಿದು ಪತ್ನಿಯ ಕೊಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .22, ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಪತಿಯೇ ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರವಾಗಿ ಹತ್ಯೆಗೈದ ಘಟನೆ ಶ್ರೀರಾಂಪುರದಲ್ಲಿ ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.

45 ವರ್ಷದ ಜಾನಕಿ ತನ್ನ ಪತಿ ಚಂದ್ರಶೇಖರ್ ಎಂಬಾತನಿಂದಲೇ ಕೊಲೆಯಾಗಿದ್ದಾರೆ. ಈ ದಂಪತಿಗೆ 2 ಹೆಣ್ಣು, 4 ಗಂಡು ಮಕ್ಕಳಿದ್ದಾರೆ. ಮಂಗಳವಾರ ಮುಂಜಾನೆ  4 ಗಂಟೆ ಸುಮಾರಿಗೆ ಹಸಿವಿನಿಂದ ಎದ್ದ ಮಗು ತಾಯಿಯ ಬಳಿ ತೆರಳಿ ಕರೆದು ಎಬ್ಬಿಸತೊಡಗಿದೆ. ಆದ್ರೆ ತಾಯಿ ಯಾವುದೇ ಪ್ರತಿಕ್ರೀಯೆ ನೀಡದ ಹಿನ್ನಲೆಯಲ್ಲಿ ಕಂದಮ್ಮ ತನ್ನ ಅಕ್ಕನ ಬಳಿ ತೆರಳಿದೆ. ಅಕ್ಕ ಎದ್ದು ತಾಯಿ ಬಳಿ ಬಂದು ನೋಡಿದಾಗ ಕತ್ತಿಗೆ ಹಗ್ಗ ಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಗ್ಗ ತೆಗೆದು ತಾಯಿಯನ್ನು ಎಬ್ಬಿಸಲು ಮುಂದಾದ ಮಕ್ಕಳಿಗೆ ತಾಯಿ ಮೃತಪಟ್ಟಿರುವುದು ಅರಿವಿಗೆ ಬಂದಿದೆ. ಮಕ್ಕಳು ಕೂಡಲೇ ತಮ್ಮ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.

Also Read  ➤ನೃತ್ಯ ಮಾಡುತ್ತಿರುವಾಗಲೇ ಆರೋಗ್ಯ ಸಿಬ್ಬಂದಿ ಕುಸಿದು ಬಿದ್ದು ಮೃತ್ಯು..!

ಚಂದ್ರಶೇಖರ್ ಹಾಗೂ ಜಾನಕಿ ಮದುವೆಯಾಗಿ 15 ವರ್ಷಗಳಾಗಿವೆ. ಕಳೆದ ನಾಲ್ಕು ವರ್ಷದಿಂದ ಇಬ್ಬರ ನಡುವೆ ಜಗಳವಾಗಿ ಕೊರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಇಬ್ಬರು ದೂರವಾಗಿದ್ದವರು ಕೆಲದಿನಗಳ ಹಿಂದೆ ಒಟ್ಟಿಗೆ ಇದ್ದರು. ಸೋಮವಾರ ತಡರಾತ್ರಿ ನಡೆದ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆರೋಪಿ ಚಂದ್ರಶೇಖರ್‍ಗೆ ಮತ್ತೊಂದು ಮಹಿಳೆ ಜೊತೆ ಅನೈತಿಕ ಸಂಬಂಧವಿರುವ ಬಗ್ಗೆಯೂ ಆರೋಪ ಕೇಳಿಬರುತ್ತಿದೆ.

ಸದ್ಯ ಮೃತ ಜಾನಕಿ ಶವವನ್ನು ಕೆಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top