(ನ್ಯೂಸ್ ಕಡಬ) newskadaba.com ಕಡಬ, ಆ. 23, ಡಾ| ಮುರಲೀ ಮೋಹನ್ ಚೂಂತಾರು ಸುಬ್ರಹ್ಮಣ್ಯ ಘಟಕಕ್ಕೆ ಇತ್ತೀಚೆಗೆ ಭೇಟಿ ನೀಡಿ ಕವಾಯತು ವೀಕ್ಷಿಸಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಠಾರ ಅಂಗಡಿಗುಡ್ಡೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿದರು.
ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯದರ್ಶಿಯವರಾದ ಶ್ರೀಯುತ ರವೀಂದ್ರರವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಗೃಹರಕ್ಷಕರು ದೇವಸ್ಥಾನದಲ್ಲಿ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಒಂದು ಗಿಡ ನೆಟ್ಟರೆ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದು. ಗಿಡ ನೆಟ್ಟು ಪರಿಸರ ಬೆಳೆಸಿ ಉಳಿಸೋಣ ನಾವೆಲ್ಲ ಒಂದೆಡೆ ಸೇರಿ ಒಂದಷ್ಟು ಗಿಡನೆಡಲು ಕೈ ಜೋಡಿಸೋಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಘಟಕದ ಘಟಕಾಧಿಕಾರಿಯವರಾದ ಶ್ರೀ ವಿಶ್ವನಾಥ ಮತ್ತು ಸುಬ್ರಹ್ಮಣ್ಯ ಘಟಕದ 30 ಗೃಹರಕ್ಷಕರು ಉಪಸ್ಥಿತರಿದ್ದರು.