(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.7 ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಬೆಳೆಸುವ ಆಶಯದೊಂದಿಗೆ ಡಿಸೆಂಬರ್ 6 ರಂದು ಕೆನರಾ ಹೈಸ್ಕೂಲ್, ಸಿ.ಬಿ.ಎಸ್.ಇ, ಡೊಂಗರ್ ಕೇರಿ ಶಾಲೆಯಲ್ಲಿ ಫಿಲಾಟೆಲಿ ಕ್ಲಬ್ ನ ಉದ್ಘಾಟನೆಯನ್ನು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಹರ್ಷ ಉದ್ಘಾಟಿಸಿದರು.
ಫಿಲಾಟೆಲಿಸ್ಟ್ ಲಕ್ಷ್ಮಣ್ ಪ್ರಭು ಅವರು ಮಕ್ಕಳಿಗೆ ಸ್ಟಾಂಪ್ ಸಂಗ್ರಹಣೆಯ ಹವ್ಯಾಸದ ಕುರಿತು ಅರಿವು ಮೂಡಿಸಿದರು ಹಾಗೂ ತಮ್ಮ ಅಂಚೆ ಚೀಟಿ ಸಂಗ್ರಹಣೆಯ ಪ್ರದರ್ಶನವನ್ನು ಮಾಡಿದರು. ಶಾಲೆಯ ಪ್ರಿನ್ಸಿಪಾಲ್ ಜೋಯ್ ಜೆ ರೈ, ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಬಿ, ಫಿಲಾಟೆಲಿ ಕ್ಲಬ್ ನ ಸೆಕ್ರೆಟರಿ ಪ್ರವೀಣ ಉಪಸ್ಥಿತರಿದ್ದರು. ಫಿಲಾಟೆಲಿ ಕ್ಲಬ್ ಆರಂಭಿಸಲು ಆಸಕ್ತ ಶಾಲೆಗಳು ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಮಂಗಳೂರು ಹಾಗೂ ದೂರವಾಣಿ ಸಂಖ್ಯೆ: 0824-2218400 ನ್ನು ಸಂಪರ್ಕಿಸಲು ಹಿರಿಯ ಅಂಚೆ ಅಧೀಕ್ಷಕರ ಕಾರ್ಯಾಲಯ, ಮಂಗಳೂರು ವಿಭಾಗ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.