ಕೆಎಸ್‍ಆರ್ ಟಿಸಿಯಲ್ಲಿ ತಾಂತ್ರಿಕ ತರಬೇತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗ ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ, ಪಾಸಾ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಿಂದ ಶಿಶಿಕ್ಷು ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 4.


ಐ.ಟಿ.ಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಶಿಶಿಕ್ಷು ವೃತ್ತಿಯ ಹೆಸರು- ಪಾಸಾ- ಒಟ್ಟು ಸ್ಥಾನಗಳ ಸಂಖ್ಯೆ-20, ಇಲೆಕ್ಟ್ರೀಷಿಯನ್-23, ಫಿಟ್ಟರ್-6, ಮೆಕ್ಯಾನಿಕ್ ಡೀಸೆಲ್-78, ಎಂವಿ.ಬಿ.ಬಿ-4, ವೆಲ್ಡರ್-8, ಇಲೆಕ್ಟ್ರಾನಿಕ್ ಮೆಕ್ಯಾನಿಕ್-16, ಎಂ.ಎಂ.ವಿ- 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ತರಬೇತಿ ಅವಧಿ 1 ವರ್ಷ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಶಿಶಿಕ್ಷು ವೃತ್ತಿಯ ಹೆಸರು- ಇಲೆಕ್ಟ್ರೀಷಿಯನ್ -2, ಮೆಕ್ಯಾನಿಕ್ ಡೀಸೆಲ್-11, ಇಲೆಕ್ಟ್ರಾನಿಕ್ ಮೆಕ್ಯಾನಿಕ್-4, ಎಂ.ಎಂ.ವಿ- 4. ತರಬೇತಿ ಅವಧಿ 2 ವರ್ಷ. ಆಯ್ಕೆಯಾದವರಿಗೆ ಮೊದಲ ವರ್ಷ ಮಾಸಿಕ ರೂ. 7708, ಎರಡನೇ ವರ್ಷದಲ್ಲಿ ಮಾಸಿಕ ರೂ. 8809  ಹಾಗೂ ಮೂರನೇ ವರ್ಷದಲ್ಲಿ ಮಾಸಿಕ ರೂ. 9910 ತರಬೇತಿ ಭತ್ಯೆ ನೀಡಲಾಗುವುದು. ಅರ್ಜಿಗಳನ್ನು ಆಯೋಗದ ಅಂತರ್ಜಾಲಕ್ಕೆ  ಆನ್‍ಲೈನ್ ಮೂಲಕ ನೋಂದಣಿ ಮಾಡಬೇಕು ಹಾಗೂ ನೋಂದಣಿ ಪ್ರತಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳಿಗೆ 18 ವರ್ಷ ತುಂಬಿರಬೇಕು ಹಾಗೂ 26 ವರ್ಷಗಳಿಗಿಂತ ಕಡಿಮೆ ಇರಬೇಕು.

Also Read  ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು


ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಪ್ರತಿ-2, ಬ್ಯಾಂಕ್ ಪಾಸ್ ಬುಕ್ ಪ್ರತಿ-2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ, ಇಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣದ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಚೇರಿಯಿಂದ ನೀಡುವ ಅರ್ಜಿಯನ್ನು ಭರ್ತಿಗೊಳಿಸಿ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿಯೊಂದಿಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ ನಿಗಮ, ವಿಭಾಗೀಯ ಕಚೇರಿ, ಪುತ್ತೂರು ವಿಭಾಗ ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು, ದ.ಕ ಜಿಲ್ಲೆ ಇಲ್ಲಿ ನೇರ ಸಂದರ್ಶನಕ್ಕೆ ಜನವರಿ 7 ರಂದು ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

Also Read  ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್

error: Content is protected !!
Scroll to Top