ಪ್ರಜ್ಞಾ ಸಲಹಾ ಕೇಂದ್ರ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಿತ ಪ್ರಜ್ಞಾ ಸ್ವಾಧಾರ ಗೃಹಕ್ಕೆ ಮಾಸಿಕ ರೂ. 5,000 ಗೌರವಧನ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಎಂಟನೇ ತರಗತಿ ವಿದ್ಯಾರ್ಹತೆ ಹೊಂದಿರುವ 18 ರಿಂದ 38 ವರ್ಷ ವಯೋಮಿತಿಯುಳ್ಳ ಅರ್ಹ ಮಹಿಳಾ ಅಭ್ಯರ್ಥಿಯಿಂದ ಅರ್ಜಿ ಆಹ್ವಾನಿಸಲಾಗಿದೆ.


ಪ್ರಜ್ಞಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಇಲ್ಲಿ ತೆರವಾಗಿರುವ ಸಮಾಜ ಕಾರ್ಯಕರ್ತರ ರಾತ್ರಿ ಪಾಳಿ ಹುದ್ದೆಗೆ ಮಾಸಿಕ ರೂ. 10,000 ಗೌರವಧನ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಬಿ.ಎ ಸೈಕಾಲಜಿ, ಬಿ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರುವ 18ರಿಂದ 45 ವರ್ಷ ವಯೋಮಿತಿಯುಳ್ಳ ಪುರುಷ ಅಭ್ಯರ್ಥಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 17.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0824-2432682, ಪ್ರೊ. ಹಿಲ್ಡಾ ರಾಯಪ್ಪನ್, ನಿರ್ದೇಶಕರು, ಪ್ರಜ್ಞಾ ಸಲಹಾ ಕೇಂದ್ರ, ಪಳ್ನೀರು ರೋಡ್, ಕಂಕನಾಡಿ ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಖಾಸಗಿ ಬಸ್ ನಡಿಗೆ ಬಿದ್ದು ಕಂದಮ್ಮ ಮೃತ್ಯು

error: Content is protected !!
Scroll to Top