ಫಲಪುಷ್ಪ ಪ್ರದರ್ಶನದ ಅಂಗವಾಗಿ ವಿವಿಧ ಸ್ಪರ್ಧೆಗಳು

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.7   2019-20 ನೇ ಸಾಲಿನ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನದ ಅಂಗವಾಗಿ ಜನವರಿ 1 ರಂದು ಕದ್ರಿ ಉದ್ಯಾನವನದಲ್ಲಿ ವಿವಿಧ ಸ್ವರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.


ಮಕ್ಕಳಿಗೆ ತರಕಾರಿ, ಹೂ, ಹಣ್ಣು ಬೀಜಗಳನ್ನು ಗುರುತಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯನ್ನು 3 ವಿಭಾಗಗಲ್ಲಿ ನಡೆಸಲಾಗುವುದು. ಮೊದಲನೆ ವಿಭಾಗ- 1 ನೇ ತರಗತಿಯಿಂದ 4ನೇ ತರಗತಿ ಮಕ್ಕಳಿಗೆ, 2 ನೇ ವಿಭಾಗ – 5 ನೇ ತರಗತಿಯಿಂದ 7 ನೇ ತರಗತಿಯವರೆಗೆ, 3 ನೇ ವಿಭಾಗ- 8ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕುಂಡಗಳಲ್ಲಿ, ಗ್ರೋಬ್ಯಾಗ್‍ಗಳಲ್ಲಿ, ಸಿಮೆಂಟ್ ಕುಂಡಗಳಲ್ಲಿ ತರಕಾರಿ ಬೆಳೆಸುವ ಸ್ಪರ್ಧೆ – 12 ರಿಂದ 16 ಇಂಚುಗಳ ಕುಂಡ, ಗ್ರೋಬ್ಯಾಗ್, ಸಿಮೆಂಟ್ ಕುಂಡಗಳಲ್ಲಿ ತಮ್ಮ ಮನೆಗಳಲ್ಲಿಯೇ ತರಕಾರಿಯನ್ನು ಬೆಳೆಸಿಕೊಂಡು ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ಕದ್ರಿ ಉದ್ಯಾನವನದಲ್ಲಿ ಪ್ರದರ್ಶಿಕೆಗಳಾಗಿ ಇಡಲಾಗುವುದು. ಈ ಸ್ಪರ್ಧೆಯಲ್ಲಿ ಹಾಲುಬೆಂಡೆ, ಬದನೆ, ಸೋರೆಕಾಯಿ, ಅರಿವೆ ಸೊಪ್ಪು ಹಾಗೂ ಅಲಸಂಡೆ ಬೆಳೆಯನ್ನು ಬೆಳೆಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವುದು.

Also Read  ಕಡಬ: ಗೃಹರಕ್ಷಕ ದಳದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ➤ ಜಿಲ್ಲಾ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ಭೇಟಿ

ಕುಂಡಗಳಲ್ಲಿ, ಗ್ರೋಬ್ಯಾಗ್‍ಗಳಲ್ಲಿ, ಸಿಮೆಂಟ್ ಕುಂಡಗಳಲ್ಲಿ ಹೂ ಬೆಳೆಸುವ ಸರ್ಧೆ – 8 ರಿಂದ 12 ಇಂಚುಗಳ ಕುಂಡ/ಸಿಮೆಂಟ್ ಕುಂಡಗಳಲ್ಲಿ ತಮ್ಮ ಮನೆಗಳಲ್ಲಿಯೇ ಹೂವಿನ ಗಿಡಗಳನ್ನು ಬೆಳೆಸಿಕೊಂಡು ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ಕದ್ರಿ ಉದ್ಯಾನವನದಲ್ಲಿ ಪ್ರದರ್ಶಿಕೆಗಳಾಗಿ ಇಡಲಾಗುವುದು. ಈ ಸ್ಪರ್ದೆಯಲ್ಲಿ ಪೆರಿವಿಂಕಲ್, ಯುಪೊರ್ಬಿಯಾ, ಅಂಥ್ಯೂರಿಯಮ್, ಗುಲಾಬಿ, ದಾಸವಾಳ ಗಿಡಗಳನ್ನು ಬೆಳೆಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ದೂರವಾಣಿ ಸಂ: 0824-2423615, 8277806372 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top