ಹಿಂದುಳಿದ ವರ್ಗಗಳ ಪ್ರೋತ್ಸಾಹಧನ – ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

 

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.7  2019-20 ನೇ ಸಾಲಿಗೆ ಐಐಎಮ್, ಐಐಟಿ, ಐಐಎಸ್‍ಸಿ, ಐಐಐಟಿಎಸ್, ಎನ್‍ಐಟಿಎಸ್, ಐಐಎಸ್‍ಇಆರ್ ಎಸ್, ಎಐಐಎಮ್‍ಎಸ್, ಎನ್‍ಎಲ್‍ಯು, ಐಎಸ್‍ಎಮ್, ಐಎಸ್‍ಪಿ, ಐಎಸ್‍ಐ, ಜೆಐಪಿಎಮ್‍ಇಆರ್, ಎಸ್‍ಪಿಎ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ),  3(ಎ)  ಹಾಗೂ  3(ಬಿ) ಹಾಗೂ ಸಮಾನ್ಯ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಿದ ನಂತರ ಅರ್ಜಿ ಹಾಗೂ ತತ್ಸಂಬಂಧಿ ದಾಖಲೆಗಳ ದೃಢೀಕೃತ ಹಾರ್ಡ್ ಪ್ರತಿಯನ್ನು ಜಿಲ್ಲಾ ಅಧಿಕಾರಿಯವರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಿಜೈ-ಕಾಫಿಕಾಡ್, ಆನೆಗುಂಡಿ ರೋಡ್, ಮಂಗಳೂರು ಈ ಕಛೇರಿಗೆ ಡಿಸೆಂಬರ್ 16 ರ ಒಳಗಾಗಿ ಸಲ್ಲಿಸಬೇಕು. ಹಾರ್ಡ್ ಪ್ರತಿಯನ್ನು ಸಲ್ಲಿಸದೇ ಇರುವ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 8050770004  ಅನ್ನು ಸಂಪರ್ಕಿಸಲು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ನ್ಯಾಯಸಮ್ಮತ ಚುನಾವಣೆ ನಡೆಸಲು ಕೋವಿ    ➤ ಶಸ್ತ್ರಾಸ್ತ್ರ ದಾಸ್ತಾನಿರಿಸಲು ಜಿಲ್ಲಾಧಿಕಾರಿ ಸೂಚನೆ.!                        

error: Content is protected !!
Scroll to Top