ರೆಂಜಿಲಾಡಿ ಶಾಲಾ ದುರಸ್ತಿಗೆ ಸ್ಥಳ ಪರಿಶೀಲನೆ

 

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.7   ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಯಡ್ಕ ರೆಂಜಿಲಾಡಿ ಹಿ.ಪ್ರಾ. ಶಾಲೆಯ ದುರಸ್ತಿ ಬಗ್ಗೆ ಬುಧವಾರ ಸ್ಥಳ ಪರಿಶೀಲಿಸಲಾಯಿತು.


ಪ್ರಾಕೃತಿಕ ವಿಕೋಪ ನಿಧಿಯಿಂದ ರೆಂಜಿಲಾಡಿ ಶಾಲೆಗೆ ರೂ. ಎರಡುವರೆ ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಶಾಲೆಯ ಮೇಲ್ಚಾವಣಿ ಹಾಗೂ ಹೊರಾಂಗಣ ಜಗಲಿ ಅಭಿವೃದ್ಧಿಗೊಳಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ. ಕಡಬ ಜಿ.ಪಂ. ಸಹಾಯಕ ಇಂಜಿನೀಯರ್ ಭರತ್ ಶಾಲೆಗೆ ಬೇಟಿ ನೀಡಿ ಕಾಮಗಾರಿ ನಡೆಸಲು ಉದ್ದೇಶಿಸಿರುವ ಸ್ಥಳದ ಪರಿಶೀಲನೆ ನಡೆಸಿದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಮುಖ್ಯ ಶಿಕ್ಷಕ ಮೇದಪ್ಪ ಗೌಡ, ದೈಹಿಕ ಶಿಕ್ಷಣ ಶಿಕ್ಷಕ ಬೇಬಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Also Read  ರಾಷ್ಟ್ರೀಯ ಜನತಾ ನ್ಯಾಯಾಲಯ ➤ ಪ್ರಕರಣಗಳ ವಿಲೇವಾರಿಗೆ ಅವಕಾಶ

error: Content is protected !!
Scroll to Top