(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ , ಡಿ.6 ಜಿಲ್ಲಾಧಿಕಾರಿಗಳ ಪ್ರಾಕೃತಿಕ ವಿಕೋಪ ನಿಧಿಯಿಂದ ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ. ಶಾಲೆಗೆ ರೂ. 32 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಕೂಡಲೇ ಶಾಲಾ ಸುಸಜ್ಜಿತ ಕೊಠಡಿಗಳೊಂದಿಗೆ ಅಭಿವೃದ್ಧಿ ಪಡಿಸಲಾಗುವುದೆಂದು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ತಿಳಿಸಿದ್ದಾರೆ.
2019ನೇ ಸಾಲಿನ ಮುಂಗಾರು ಮಳೆಯಿಂದ ಹಾನಿಯಾದ ಸರಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ ತನ್ನ ಜಿ.ಪಂ. ವ್ಯಾಪ್ತಿಯ 8 ಶಾಲೆಗಳಿಗೆ ಅನುದಾನ ಬಿಡುಗಡೆಗೊಂಡಿದ್ದು, ಎಲ್ಲಾ ಶಾಲೆಗಳ ದುರಸ್ತಿ ಮಾಡಿಸಲಾಗುವುದು ಎಂದ ಅವರು ಶಾಲೆಯಲ್ಲಿ ಅಡುಗೆ ಕೊಠಡಿ, ಸುಸಜ್ಜಿತ ಶೌಚಾಲಯ, ಆಟದ ಮೈದಾನ ಸೇರಿದಂತೆ ಶಾಲೆಗಳಿಗೆ ಪಿಠೋಪಕರಣ ಖರೀದಿಸಲು ಜಿ.ಪಂ. ಅನುದಾನ ಒದಗಿಸಲಾಗುವುದೆಂದು ಹೇಳಿದರು. ಬುಧವಾರ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಗೆ ಬೇಟಿ ನೀಡಿದ ಅವರು ಈ ಬಗ್ಗೆ ತಿಳಿಸಿದರು. ಪಂಚಾಯತ್‍ರಾಜ್ ವಿಭಾಗದ ಪುತ್ತೂರು ಉಪವಿಭಾಗ ಸಹಾಯಕ ಇಂಜಿನಿಯರ್ ಭರತ್ ರವರು ಕಟ್ಟಡ ನಿರ್ವಹಣೆ ಬಗ್ಗೆ ಮಹಜರು ನಡೆಸಿದರು. ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮಣ ಗೌಡ ಪೆತ್ತಲ, ಗುತ್ತಿಗೆದಾರ ಉಸ್ಮಾನ್ ಕೊಲ್ಲೆಜಾಲು, ಶಾಲಾ ಶಿಕ್ಷಕ ಬಾಲಕೃಷ್ಣ ಎಂ. ಉಪಸ್ಥಿತರಿದ್ದರು.