ಇಂದು ವಸತಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.5  ಕರ್ನಾಟಕ ರಾಜ್ಯದ ‘ರಾಜೀವ ಗಾಂಧಿ ವಸತಿ ನಿಗಮ ನಿಯಮಿತ’ದ ಮೂಲಕ ಅನುಷ್ಟಾನಗೊಳಿಸುತ್ತಿರುವ ‘ಬಸವ ವಸತಿ’, ‘ಇಂದಿರಾ ಆವಾಜ್’, ‘ಅಂಬೇಡ್ಕರ್ ವಸತಿ’, ಇತ್ಯಾದಿ ಯೋಜನೆಗಳಡಿ ಮನೆಗಳ ತಳಪಾಯ, ಗೋಡೆ ನಿರ್ಮಾಣ ಆದರೂ ಕೂಡ ಅನುದಾನ ಬಿಡುಗಡೆ ಆಗದ ಬಗ್ಗೆ ಡಿಸೆಂಬರ್ 5 ರಂದು ಮಧ್ಯಾಹ್ನ 3 ಗಂಟೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಂಭಾಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.

ಪ್ರತಿ ಜಿಲ್ಲೆಯಲ್ಲಿಯೂ ಹಣ ಬಿಡುಗಡೆಯಾಗದ ಮನೆಗಳ ವಿವರವನ್ನು ಉಸ್ತುವಾರಿ ಸಚಿವರ ನೇತೃತ್ವದ ಸಭೆಯಲ್ಲಿ ಗಮನಿಸಿ ಶಿಫಾರಸ್ಸು ಮಾಡಬೇಕೆಂಬ ಸರಕಾರದ ಯೋಚನೆಯಂತೆ ಸಭೆ ನಡೆಯಲಿದ್ದು, ಜಿಲ್ಲೆಯಲ್ಲಿ ಹಣ ಬಿಡುಗಡೆಯಾಗದೆ ನೆನೆಗುದಿಗೆ ಬಿದ್ದಿರುವ ಸುಮಾರು 3,500 ಮನೆಗಳ ಸಮಸ್ಯೆ ನಿವಾರಣೆಯಾಗಲಿದೆ ಎಂದು ಉಸ್ತುವಾರಿ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಚಾರ್ಮಾಡಿ ಘಾಟ್ ರಸ್ತೆಯಲ್ಲಿ 2 ದಿನ ವಾಹನ ಸಂಚಾರ ನಿಷೇಧ

error: Content is protected !!
Scroll to Top