(ನ್ಯೂಸ್ ಕಡಬ) newskadaba.com, ನೆಲ್ಯಾಡಿ , ಡಿ.4 ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನ ಹೊರಸೂಸುವ ಉದ್ದೇಶದಿಂದ ಆಯೋಜಿಸಿದ ಕಲಾ ಪರ್ವ 2k19 ನ್ನು ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರೂ ಈಗಿನ ಸದಸ್ಯರೂ ಆಗಿರುವ ಜಯಾನಂದ ಬಂಟ್ರಿಯಾಲ್ ದೀಪಬೆಳಗಿಸಿ, ಕಳಸೆಗೆ ಭತ್ತ ಸುರಿದು, ಪಿಂಗಾರವನ್ನು ಅರಳಿಸಿ ತುಳುನಾಡ ಸಂಸ್ಕೃತಿಯಂತೆ ಕಾರ್ಯಕ್ರಮ ಉದ್ಘಾಟಿಸಿದರು.
ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ಬೆಳಯಲು ಅವಕಾಶ ಕಲ್ಪಿಸುತ್ತಿರುವುದು ಬೆಥನಿ ಸಂಸ್ಥೆಗಳ ವಿಶೇಷತೆ. ಇತ್ತೀಚಿನ ದಿನಗಳಲ್ಲಿ ಕಲೆ, ಕ್ರೀಡೆ ಅದೇರೀತಿ ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲೂ ಮಕ್ಕಳು ಪಾಲುದಾರರಾಗುವಂತೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ವಿಚಾರ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಆ ವಿದ್ಯಾರ್ಥಿಗಳು ಇಂದು ಆ ಕ್ಷೇತ್ರದಲ್ಲಿ ಬೆಳೆದು ಜೀವನ ಕಲೆ ರೂಪಿಸಿರುತ್ತಾರೆ. ಎಂದು ತಮ್ಮ ಶಾಲಾ ದಿನಗಳಲ್ಲಿ ಅಧ್ಯಾಪಕರು ನೀಡುರುವ ಪ್ರೋತ್ಸಾಹದ ಕೆಲಸಗಳನ್ನು ಹಾಗೂ ಅದರ ಪರಿಣಾಮಗಳನ್ನು ನೆನಪಿಸುತ್ತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸ.ಪ.ಪೂ.ಕಾಲೇಜು ಉಪ್ಪನಂಗಡಿ ಹಾಗೂ ಮಂಗಳೂರು ವಿಶ್ವ ವಿದ್ಯಾ ನಿಲಯದ ನೆಲ್ಯಾಡಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ಹೇಮಾವತಿ ಕೆ ತುಳುನಾಡಿನ ಪ್ರಾದೇಶಿಕ ಸಂಸ್ಕೃತಿಯ ಬಗ್ಗೆ ಸವಿವರ ಮಾತುಗಳಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರೂ, ಪ್ರಾಂಶುಪಾಲರೂ ಆದ ರೆ|ಫಾ|ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ವಹಿಸಿದ್ದರು. ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ, ಸಂಸ್ಥೆಯ ಬರ್ಸರ್ ರೆ|ಫಾ| ಐಸಕ್ ಸ್ಯಾಂ ಒಐಸಿ, ಉಪ ಪ್ರಾಂಶುಪಾಲೆ ಗೀತಾ ಯು. ಹಾಗೂ ಪಿಟಿಎ ಅಧ್ಯಕ್ಷರಾದ ಸಿ.ಎಂ ತೋಮಸ್, ಟೀಚರ್ ಕೋಡಿನೇಟರ್ಸ್ ಲೋಕೇಶ್ ಹಾಗೂ ಸ್ಮಿತಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಸ್ಟುಡೆಂಟ್ ಕೋಡಿನೇಟರ್ಸ್ ವಿದ್ಯಾರ್ಥಿ ನಾಯಕ ಶಿನ್ಸ್ ಪಿ ಆಂಟನಿ ಸ್ವಾಗತಿಸಿ, ಜಿಲ್ಷಿತಾ ವಂದಿಸಿದರು. ಜಿನ್ಸಿ ತೋಮಸ್ ಹಾಗೂ ಹರ್ಷಾನ ಕಾರ್ಯಕ್ರಮ ನಿರೂಪಿಸಿದರು.