ಉಚಿತ ಕಂಪ್ಯೂಟರ್ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4   ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದಿಂದ ಮುಖ್ಯಮಂತ್ರಿ ಕರ್ನಾಟಕ ಕೌಶಲ್ಯ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ನಿರುದ್ಯೋಗಿ ಯುವಕ/ಯುವತಿಯರಿಗೆ ವಿಶೇಷವಾಗಿ ದೈಹಿಕ ವಿಕಲಚೇತನರಿಗೂ ಕೂಡಾ ಉಚಿತವಾಗಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಕಂಪ್ಯೂಟರ್ ಹಾರ್ಡ್‍ವೇರ್ ಆ್ಯಂಡ್ ನೆಟ್ವರ್ಕಿಂಗ್ ತರಬೇತಿಗಳನ್ನು ನೀಡಲಾಗುತ್ತದೆ.


ಯಶಸ್ವಿಯಾಗಿ ತರಬೇತಿ ಮುಗಿಸಿದವರಿಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿ ಕೊಡಲಾಗುತ್ತದೆ. ಉಚಿತ ತರಬೇತಿಗಳು 90 ದಿವಸಗಳವರೆಗೆ ಇರುತ್ತದೆ. ಕನಿಷ್ಟ 18 ರಿಂದ 35 ವಯಸ್ಸಿನವರು ತರಬೇತಿಗೆ ಅರ್ಹರಾಗಿರುತ್ತಾರೆ. ಕಂಪ್ಯೂಟರ್ ಹಾರ್ಡ್‍ವೇರ್ ಆ್ಯಂಡ್ ನೆಟ್ವರ್ಕಿಂಗ್ ತರಬೇತಿಗೆ ಪಿ.ಯು.ಸಿ ಪಾಸ್ ಹಾಗೂ ಸೆಲ್ಫ್ ಎಂಪ್ಲೋಡ್ ಟೈಲರ್ ತರಬೇತಿಗೆ ಎಂಟನೇ ತರಗತಿ ಪಾಸಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೆರಿಟ್ಯೂಡ ಸ್ಕಿಲ್ ಡೆವಲೊಪ್‍ಮೆಂಟ್ ಪ್ರೈವೇಟ್ ಲಿಮಿಟೆಡ್, 4ನೇ ಮಹಡಿ, ಜಿ.ಹೆಚ್. ಎಸ್ ಸೆಂಟನರಿ ಬಿಲ್ಡಿಂಗ್, ಜಿ.ಹೆಚ್.ಎಸ್ ರೋಡ್ ಹಂಪನ್‍ಕಟ್ಟೆ ಮಂಗಳೂರು, ಮೊಬೈಲ್ ಸಂಖ್ಯೆ 7204051677 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಇನ್ನು ಮುಂದೆ ವಾಟ್ಸಾಪ್ ಮೂಲಕ ಗ್ಯಾಸ್ ಬುಕ್ ಮಾಡಿ ➤ ಹೇಗೆಂದು ತಿಳಿಯಬೇಕೆ..?

error: Content is protected !!
Scroll to Top