ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.3  ಪ್ರಥಮ ಪಿ.ಯು.ಸಿ ವಿದ್ಯಾರ್ಥಿಯೋರ್ವಳು ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಿನ್ನೆ ನಡೆದಿದೆ.

ಮೃತ ಬಾಲಕಿಯನ್ನು ಪುತ್ತೂರು ಕಸಬಾ ಗ್ರಾಮದ ಗೀತಾರವರ ಮಗಳು ಉಷಾ ಎಂದು ಗುರುತಿಸಲಾಗಿದೆ. ಕಾಲೇಜಿಗೆ ರಜೆ ಇದ್ದುದರಿಂದ ಮಗಳು ಉಷಾ ಮನೆಯಲ್ಲಿಯೇ ಇದ್ದು , ಸಂಜೆ ಸುಮಾರು 6.00 ಗಂಟೆಯ ವೇಳೆಗೆ ಪರಿಚಯದ ವ್ಯಕ್ತಿಯೋರ್ವರು ಫೋನು ಮಾಡಿ ಕೂಡಲೇ ಮನೆಗೆ ಬರುವಂತೆ ಗೀತಾರವರಿಗೆ ತಿಳಿಸಿದರು. ಮನೆಗೆ ಬಂದಾಗ ಉಷಾ ತನ್ನ ಚಿಕ್ಕಮ್ಮನ ರೂಮಿನೊಳಗೆ ಅಡ್ಡಕ್ಕೆ ಚೂಡಿದಾರರ ವೇಲ್ನಿಂದ ನೇಣು ಹಾಕಿಕೊಂಡು ಮೃತಪಟ್ಟಿರುವುದು ಕಿಟಕಿಯ ಮೂಲಕ ಕಂಡು ಬಂದಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಭಾರೀ ಮಳೆ- ಮರವೂರು ಸೇತುವೆಯ ಬಳಿ ರಸ್ತೆ ಬಿರುಕು

error: Content is protected !!
Scroll to Top