ಮೊಟ್ಟೆ ಒಡೆದು, ನಿಂಬೆಹಣ್ಣು ಕುಯ್ದು ► ಸರ್ಕಾರಿ ಆಸ್ಪತ್ರೆಯಲ್ಲೇ ವಾಮಾಚಾರ

(ನ್ಯೂಸ್ ಕಡಬ) newskadaba.com ಮೈಸೂರು, ಆ .21, ಮೂರು ಕಡೆ ಕೂಡುವ ರಸ್ತೆಯಲ್ಲಿ, ಮನೆ ಹಾಗೂ ಕಚೇರಿ ಮುಂಭಾಗದ ರಸ್ತೆಗಳಲ್ಲಿ ವಾಮಾಚಾರ ಮಾಡುವುದನ್ನು ನೋಡಿದ್ದೇವೆ… ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಚೇರಿಯಲ್ಲಿ ವಾಮಾಚಾರ ನಡೆದಿರುವುದು ವೈದ್ಯರೂ ಸೇರಿದಂತೆ ಎಲ್ಲರಿಗೂ ಶಾಕ್ ನೀಡಿದೆ. ಇಂತಹದೊಂದು ಘಟನೆ ಮೈಸೂರಿನ ಕೆ.ಆರ್. ನಗರದಲ್ಲಿ ಸೋಮವಾರ ನಡೆದಿದೆ‌‌.

ಕೆ.ಆರ್.ನಗರ ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಯ೯ಗ್ರಹಣ ಹಾಗೂ ಅಮವಾಸ್ಯೆ ಇರುವ ದಿನದಂದು ವಾಮಾಚಾರ ಮಾಡಿರುವುದರಿಂದ ಇಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ಶಾಕ್ ಆಗಿದ್ದಾರೆ. ಯಾರು, ಯಾರಿಗೆ ವಾಮಾಚಾರ ಮಾಡಿಸಿದ್ದಾರೆ ಎಂಬ ಆತಂಕ ಎಲ್ಲರಲ್ಲೂ ಸೃಷ್ಟಿಯಾಗಿದೆ.

Also Read  ಮಂಗಳೂರು: 3 ಟೋಲ್ ಗೇಟ್‌ಗಳಲ್ಲಿ ಏ.1ರಿಂದ ಶುಲ್ಕ ಹೆಚ್ಚಳ

ಆಸ್ಪತ್ರೆಯ ಆಡಳಿತಧಿಕಾರಿ ಡಾ. ಹೆಚ್.ಡಿ.ಶರತ್ ಕಚೇರಿಯಲ್ಲಿ ಮೊಟ್ಟೆ ಒಡೆದು, ನಿಂಬೆಹಣ್ಣು ಕುಯ್ದು ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ. ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!
Scroll to Top