ಕಡ್ಯ ಕೊಣಾಜೆ: ಕಿರು ಸೇತುವೆಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.3   ಕಡ್ಯ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮೇರು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.


ಕಡ್ಯ ಕೊಣಾಜೆ ಗ್ರಾ.ಪಂ. ವ್ಯಾಪ್ತಿಯ ಪಟ್ಟೆ ಮೂಡಾಲ ಎಸ್.ಸಿ. ಕಾಲೋನಿ ಸಂಪರ್ಕಿಸುವ ಕುಮೇರು ಎಂಬಲ್ಲಿ ಹರಿಯುತ್ತಿರುವ ತೋಡಿಗೆ ತಾ.ಪಂ.ನ ರೂ 2 ಲಕ್ಷ ಹಾಗೂ ಗ್ರಾ.ಪಂ.ನ ರೂ. 4 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲು ತಾ.ಪಂ. ಸದಸ್ಯೆ ಪಿ.ವೈ.ಕುಸುಮ ಅವರು ಶಂಕುಸ್ಥಾಪನೆ ನೆರವೇರಿಸಿ, ಶೀಘ್ರ ಕೆಲಸ ನಡೆಯಲಿ ಎಂದು ಪ್ರಾರ್ಥಿಸಿದರು. ಗ್ರಾ.ಪಂ. ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ, ಸದಸ್ಯರಾದ ಪೊಡಿಯ ಗೌಡ, ಪಿಡಿಒ ಪದ್ಮನಾಭ ಗೌಡ, ಸ್ಥಳೀಯರಾದ ಚೆನ್ನಪ್ಪ ಗೌಡ ಕೆಳಗಿನಮನೆ, ಹೇಮಚಂದ್ರ, ನವೀನ ಕನಿಯ, ಚಂದ್ರಶೇಖರ ಕಡಂಪಳ, ಡೀಕಯ್ಯ ಪೂಜಾರಿ ಪಟ್ಟೆ, ಗುರುವಪ್ಪ ಪೂಜಾರಿ, ವಸಂತ, ರಾಮಣ್ಣ ಗೌಡ ಕುಮೇರು, ಏಲ್ಯಣ್ಣ ಗೌಡ ಉಪಸ್ಥಿತರಿದ್ದರು. ಸಿಬ್ಬಂದಿ ಸತೀಶ್ ಕಲ್ಲೂರ ಸ್ವಾಗತಿಸಿ, ಯಶೋಧರ ಗೌಡ ಪಲ್ಲತ್ತಡ್ಕ ವಂದಿಸಿದರು.

Also Read  ಲಾಕ್‍ಡೌನ್ ನಡುವೆಯೂ ಮರ್ಧಾಳ ಪಂಚಾಯತ್ ಸದಸ್ಯರ ಮಾದರಿ ಕಾರ್ಯ ➤ ಸಾರ್ವಜನಿಕ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿದ ಶಾಕಿರ್ ಮತ್ತು ಅಜಯ್

.

error: Content is protected !!
Scroll to Top