ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ , ಡಿ.3  ರಾಮನಗರ ಯುವಕ ಮಂಡಲದ ವತಿಯಿಂದ ಕಡ್ಯ ಕೊಣಾಜೆ ಶಾಲಾ ಕ್ರೀಡಾಂಗಣದಲ್ಲಿ 6ನೇ ವರ್ಷದ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು.


ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ ದೊಡ್ಡಮನೆ ಪಂದ್ಯಾಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಗೌಡ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮನಗರ ಯುವಕ ಮಂಡಲದ ಅಧ್ಯಕ್ಷ ಪುಂಡರೀಕಾಕ್ಷ ವಹಿಸಿದ್ದರು. ಹೊನ್ನಪ್ಪ ಗೌಡ ಕಲ್ಲೂರು, ಗಂಗಾಧರ ಗೌಡ ದೊಡ್ಡಮನೆ, ಮಂಜಪ್ಪ ಗೌಡ ಕಲ್ಲೂರು, ಶಿವಣ್ಣ ಗೌಡ ಕೊಣಾಜೆ, ಯಶೋಧರ ಗೌಡ ಉಪಸ್ಥಿತರಿದ್ದರು. ಪಂದ್ಯಾಟದ ಪ್ರಥಮ ಸ್ಥಾನವನ್ನು ಅಜಿತ್ ಸಿಸಿ ಹಾಗೂ ದ್ವಿತೀಯ ಸ್ಥಾನ ಎಂ.ಎಂ.ವೈ.ಸಿ.ನೆಟ್ಟಣ ತಂಡ ಪ್ರಶಸ್ತಿ ಪಡೆದುಕೊಂಡಿತು. ರಾಮನಗರ ಯುವಕ ಮಂಡಲದ ಉಮೇಶ ಕಲ್ಲೂರು, ಹರೀಶ ಕಲ್ಲೂರು, ಕೇಶವ, ನಿತೇಶ್, ಶ್ರೀನಾಥ್, ಸಂದೀಪ್, ಜನಾರ್ಧನ ಮುಚ್ಚಿರೋಡಿ, ಜಯಪ್ರಸಾದ್, ಭಾಸ್ಕರ ಗೌಡ ಸಹಕರಿಸಿದರು. ಸತೀಶ್ ಕಲ್ಲೂರ ಸ್ವಾಗತಿಸಿ, ವಂದಿಸಿದರು. ಮರ್ದಾಳ ಸೈಂಟ್ ಮೇರಿಸ್‍ನ ರಾಜೇಶ್ ಹಾಗೂ ಗಂಗಾಧರ ಗೌಡ ಬ್ರಂತೋಡು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

Also Read  ರೈಲಿನಿಂದ ಬಿದ್ದು ಕಡಬದ ಯುವಕ ಮೃತ್ಯು

 

error: Content is protected !!
Scroll to Top