ಎಸ್ ಬಿ ಕಾಲೇಜ್ ನೆಲ್ಯಾಡಿಯಲ್ಲಿ ನಾಳೆ ಪ್ರತಿಭೆಗಳ ಹಬ್ಬ – ಕಲಾ ಪರ್ವ 2k19

(ನ್ಯೂಸ್ ಕಡಬ) newskadaba.com, ನೆಲ್ಯಾಡಿ, ಡಿ.2  ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನ ಹೊರಸೂಸುವ ಉದ್ದೇಶದಿಂದ ಆಯೋಜಿಸಿದ ಕಲಾ ಪರ್ವ 2k19 ಹಬ್ಬವನ್ನು ದಿನಾಂಕ 3-12-2019 ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯಕ್ಷದರುವ ಫೌಂಡೇಶನ್‍ನ ಶ್ರೀ ಸತೀಶ್ ಪಾಟ್ಲಾ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರೂ, ಪ್ರಾಂಶುಪಾಲರೂ ಆದ ರೆ|ಫಾ|ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ, ಸಂಸ್ಥೆಯ ಬರ್ಸರ್ ರೆ|ಫಾ| ಐಸಕ್ ಸ್ಯಾಂ ಒಐಸಿ, ಉಪ ಪ್ರಾಂಶುಪಾಲೆ ಗೀತಾ ಯು. ಹಾಗೂ ಪಿಟಿಎ ಅಧ್ಯಕ್ಷರಾದ ಸಿ.ಎಂ ತೋಮಸ್ ಭಾಗವಹಿಸಲಿದ್ದಾರೆ.

Also Read  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ➤ ಒಟ್ಟು 9 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ

error: Content is protected !!
Scroll to Top