ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕರಿಗೆ ವಿಶ್ರಾಂತಿ ಕೊಠಡಿಯ ಉದ್ಘಾಟಣೆ

 (ನ್ಯೂಸ್ ಕಡಬ) newskadaba.com, ಮಂಗಳೂರು , ನ.30. ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿಗೆ ಆಗಮಿಸುವ ಸಂದರ್ಶಕರಿಗೆ ಸುಸಜ್ಜಿತವಾದ ವಿಶ್ರಾಂತಿಕೊಠಡಿಯ ವ್ಯವಸ್ಥೆಯನ್ನು ಶಕ್ತಿ ಶಾಲಾ ವಠಾರದಲ್ಲಿ ಕಲ್ಪಿಸಲಾಗಿದೆ. ಈ ವಿಶ್ರಾಂತಿಕೊಠಡಿಯನ್ನು ಶಕ್ತಿನಗರದ ಪದವು 21ನೇ ವಾರ್ಡ್‍ನ ಕಾರ್ಪೋರೇಟರ್ ಶ್ರೀಮತಿ ವನಿತಾ ಪ್ರಸಾದ್‍ ಗುರುವಾರದಂದು ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಅವರು ಶಕ್ತಿ ಶಾಲೆಯು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ವಿವಿಧ ರೀತಿಯ ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯವಾಗಿದೆ. ಇಂತಹ ಅದ್ಭುತವಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಿರುವ ಸಂಸ್ಥೆಯ ಸ್ಥಾಪಕರಾದ ಶ್ರೀ ಕೆ.ಸಿ ನಾೈಕ್‍ರನ್ನುಅಭಿನಂದಿಸುತ್ತೇನೆ. ಶಕ್ತಿನಗರವನ್ನು ಹೊಸ ಕಲ್ಪನೆಯ ಶಕ್ತಿ ನಗರವನ್ನಾಗಿ ರೂಪಿಸಿರುವ ಶ್ರೀಯುತರು ಯಾವುದೇ ವಿದ್ಯಾರ್ಥಿಗಳಿಗೆ ಯಾವುದೇ ಕಡಿಮೆ ಬಾರದ ಹಾಗೆ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಈ ಸಂಸ್ಥೆಯಲ್ಲಿ ಪಡೆದು ಸಮಾಜಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರಾದ ಪ್ರಸಾದ್, ಸಂಸ್ಥೆಯ ಸಂಸ್ಥಾಪಕ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೈಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‍ ರೈ, ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಕತ ಅಧ್ಯಾಪಕರಾದ ಶ್ರೀ ನಿಧಿ ಅಭ್ಯಂಕರ ನಿರೂಪಿಸಿ ಸ್ವಾಗತಿಸಿದರು.

Also Read  ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಹಿನ್ನಲೆ ➤ ಎಡೆಸ್ನಾನ, ಡಿಸಿ ಜತೆ ಚರ್ಚಿಸಿ ಅಂತಿಮ ತೀರ್ಮಾನ - ಡಾ.ಯತೀಶ್‌ ಉಳ್ಳಾಲ್‌

error: Content is protected !!
Scroll to Top