ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ

(ನ್ಯೂಸ್ ಕಡಬ) newskadaba.com ಕುಂತೂರು, ನ.30. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಕರ್ನಾಟಕ ಸರ್ಕಾರ, ಪದವಿ ಕಾಲೇಜು ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ “ಒಂದು ದೇಶ ಒಂದು ಸಂವಿಧಾನ” ಧ್ಯೇಯದಡಿ ನಡೆದ ಕಾರ್ಯಕ್ರಮದ ಅಂಗವಾಗಿ ದಿನಾಂಕ: 27-11-2019ರಂದಿನ ಸ್ಪರ್ಧೆಗೆ ನಮ್ಮ ಕಾಲೇಜಿನ 21 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಿಕ್ಷಣಾರ್ಥಿಗಳಾದ ಕು| ಸೌರಭ ಜಿ ಪ್ರಥಮ ಮತ್ತು ನವಾಜ್ ತೃತೀಯ ಹಾಗೂ ದೇಶಭಕ್ತಿಗೀತೆಯಲ್ಲಿ ಕು| ಹರ್ಷಿತಾ ಕೆ ತೃತೀಯ ಸ್ಥಾನದೊಂದಿಗೆ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಕಾಲೇಜಿನ ದೈಹಿಕ ನಿರ್ದೇಶಕರಾದ ಶ್ರೀ ಚಂದ್ರಶೇಖರ ಜಿ.ಎನ್. ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಉಪನ್ಯಾಸಕರಾದ ಶ್ರೀ ಅಜಿತ್ ಕಾಮತ್ ಮತ್ತು ಕುಮಾರಿ ತೃಪ್ತಿ ಎಂ ಶೆಟ್ಟಿಯವರು ಸಹಕರಿಸಿದರು.

Also Read  ಮಂಗಳೂರು: ಜುಗಾರಿ ಆಡುತ್ತಿದ್ದ ಮೂವರ ಬಂಧನ ➤ 75 ಸಾವಿರ ಮೌಲ್ಯದ ಸ್ವತ್ತು ವಶ

error: Content is protected !!
Scroll to Top