ಜಶ್ನೇ ಮದೀನಾ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ನ ಪೋಸ್ಟರ್ ಬಿಡುಗಡೆ

(ನ್ಯೂಸ್ ಕಡಬ) newskadaba.com, ಆತೂರು, ನ.30. ದಕ್ಷಿಣ ಕನ್ನಡ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಆಶ್ರಯದಲ್ಲಿ ಮೀಲಾದ್ ಕ್ಯಾಂಪೈನ್ ಸಮಾರೋಪ ಜಶ್ನೇ ಮದೀನಾ ಎಂಬ ಹೆಸರಿನಲ್ಲಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಡಿಸೆಂಬರ್ 2 ಸೋಮವಾರದಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವುದು ಇದರ ಪೋಸ್ಟರ್ ಬಿಡುಗಡೆಯನ್ನು ಆತೂರು ರೇಂಜ್ ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಝಾಕ್ ಬಿ. ಕೆ ಆತೂರು ಜುಮಾ ನಮಾಜ್ ನಂತರ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಆತೂರು ರೇಂಜ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಫೈಝಿ ಕರಾಯ, ಎಸ್.ಕೆ.ಎಸ್.ಎಸ್ ಎಫ್ ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ಧೀಖ್ ನೀರಾಜೆ, ಬದ್ರಿಯಾ ಶಾಲೆ ಆತೂರು ಇದರ ಸಂಚಾಲಕರಾದ ಆದ0 ಹಾಜಿ ಪಿಲಿಕುಡೆಲ್, ಆತೂರು ಮದ್ರಸ ಮೇನೇಜ್ಮೆಂಟ್ ಜಿಲ್ಲಾ ಕೌನ್ಸಿಲರಾದ ಅಬ್ದುಲ್ ಖಾದರ್, ಬದ್ರಿಯಾ ಶಾಲೆ ಆತೂರು ಇದರ ಉಪಾಧ್ಯಕ್ಷರು ಪೊಡಿಕುಂಞಿ ನೀರಾಜೆ, ಎನ್ ಎ ಇಸಾಕ್, ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳು, ಆತೂರು ರೇಂಜ್ ಮದ್ರಸ ಮೇನೇಜ್ಮೆಂಟ್ ಪದಾಧಿಕಾರಿಗಳು, ಎಸ್.ಕೆ.ಎಸ್.ಎಸ್ ಎಫ್ ಆತೂರು ಕ್ಲಸ್ಟರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Also Read  ಕಡಬ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಕಳ್ಳರ ಕೈಚಳಕ ► ನೂಜಿಬಾಳ್ತಿಲ ಚರ್ಚ್‌ನ ಕಾಣಿಕೆ ಡಬ್ಬಿ ಕಳ್ಳರ ಪಾಲು

error: Content is protected !!
Scroll to Top