ಮದ್ಯದಂಗಡಿ ಮುಚ್ಚಲು ಆದೇಶ

 (ನ್ಯೂಸ್ ಕಡಬ) newskadaba.com, ಮಂಗಳೂರು , ನ.30. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ನಡೆಯಲಿರುವ ಉತ್ಸವಾದಿ ಕಾರ್ಯಕ್ರಮಗಳು ನವೆಂಬರ್ 24 ರಿಂದ ಆರಂಭಗೊಂಡು ಡಿಸೆಂಬರ್ 2 ರವರೆಗೆ ನಡೆಯಲಿದ್ದು, ಮುಖ್ಯ ರಥೋತ್ಸವಗಳು ಇಂದಿನಿಂದ ಡಿಸೆಂಬರ್ 2 ರವರೆಗೆ ನಡೆಯಲಿದೆ.

ಆದುದರಿಂದ ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರ್ & ರೆಸ್ಟೋರೆಂಟ್‍ಗಳನ್ನು  ಇಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 2 ಮಧ್ಯರಾತ್ರಿ 12 ಗಂಟೆವರೆಗೆ ಮುಚ್ಚಲು ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧು ಬಿ ರೂಪೇಶ್ ಆದೇಶಿಸಿದ್ದಾರೆ.

Also Read  ಉಡುಪಿ: ತೈಲ ಸೋರಿಕೆಯಿಂದ ವಾಹನಗಳು ಸ್ಕಿಡ್

error: Content is protected !!
Scroll to Top