ಅಮ್ಮಾ ಊರು ಏನೇ ಅಂದರೂ ನೀನು ನನ್ನ ದೇವರು

(ನ್ಯೂಸ್ ಕಡಬ) newskadaba.com  ನ.28.  “ತಾಯಿ ಪ್ರೀತಿ ಅಮೂಲ್ಯವಾದದ್ದು…” ಅವಳು ತೋರುವ ಪ್ರೀತಿಯನ್ನು ಯಾರಿಂದಲೂ ಕೊಡಲು ಸಾಧ್ಯವಿಲ್ಲ. ತಾಯಿ-ಮಕ್ಕಳ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಮಕ್ಕಳು ಶಾಲೆಯಿಂದ ಬರುವಾಗ ತಡವಾದರಂತೂ ಕಾದು ನಿಲ್ಲುವ ಅಮ್ಮ, ದೂರದೂರಿನಲ್ಲಿ ಕೆಲಸಕ್ಕಿರುವ ಮಕ್ಕಳು ಯಾವಾಗಾದರೂ ಮನೆಗೆ ಬಂದರೆ ಅತಿಥಿಗಳಂತೆ ಸತ್ಕರಿಸುವ ತಾಯಿ, ಆಕೆ ಮಕ್ಕಳಿಗಾಗಿ ಮಾಡುವ ತ್ಯಾಗ ವರ್ಣಿಸಲಸಾಧ್ಯ… ಆದರೆ ಇಲ್ಲೊಬ್ಬ ಮಗ 40 ವರ್ಷಗಳ ನಂತರ ತಿರುಗಿ ಬಂದರೆ…?

ತಮಿಳುನಾಡು ತಂಜಾವೂರಿನ ಕಲಿಯಮೂರ್ತಿ ಹಾಗೂ ಧನಲಕ್ಷ್ಮಿ ದಂಪತಿಗಳು ಸುಮಾರು 40 ವರ್ಷಗಳ ಹಿಂದೆ  ಕಡು ಬಡತನದ ಕಾರಣದಿಂದ ಚೆನ್ನೈಗೆ ವಲಸೆ ಬಂದಿದ್ದರು. ಜನ್ಮ ನೀಡಿದ ಮಗನಾದ ಸಂತ ಕುಮಾರ್ ನನ್ನು ಸಾಕಲು ಸಾಧ್ಯವಾಗದೆ ಸಂಸ್ಥೆಯೊಂದರ ಮುಖಾಂತರ ದೆನ್ಮಾರ್ಕ್ ದೇಶದ ದಂಪತಿಗಳಿಗೆ ದತ್ತು ನೀಡಿದ್ದರು. ಆ ದಂಪತಿಗಳು ಮಗುವಿಗೆ ಡೇವಿಡ್ ನೆಲ್ಸನ್ ಎಂದು ಮರು ನಾಮಕರಣವನ್ನೂ ಮಾಡಿದ್ದರು. ಹಲವು ವರ್ಷಗಳ ನಂತರ ಈತನಿಗೆ ತನ್ನ ಹೆತ್ತ ತಂದೆ ತಾಯಿಯ ಬಗ್ಗೆ ಮಾಹಿತಿ ತಿಳಿದು, ಅವರನ್ನು ಒಮ್ಮೆಯಾದರೂ ನೋಡಬೇಕು ಎಂಬ ಛಲದಿಂದ  ಅವರನ್ನು ನೋಡುವ ಪ್ರಯತ್ನದಲ್ಲಿ ಸಫಲನಾಗಿದ್ದಾನೆ. ಕೂಡಲೆ ಹೆತ್ತವರನ್ನು ನೋಡಲು ಚೆನ್ನೈಗೆ ಆಗಮಿಸಿದ್ದಾನೆ. ಇತ್ತ ಸುಮಾರು ವರ್ಷಗಳಿಂದ ತಾವು ದತ್ತು ನೀಡಿದ್ದ ಮಗ ನಮ್ಮನ್ನು ನೋಡಲು ಬರುವ ವಿಷಯ ತಿಳಿದ ಆತನ ಹೆತ್ತವರು ಸಂತೋಷದಿಂದ ಬರಮಾಡಿಕೊಂಡು, ಆತನಿಗೆ ಸಿಹಿ ತಿನ್ನಿಸಿ ಉಯ್ಯಾಲೆ ಮೇಲೆ ಕೂರಿಸಿ ಲಾಲಿ ಹಾಡಿ ಆಸೆ ತೀರಿಸಿಕೊಂಡಿದ್ದಾರೆ. ಇದನ್ನು ತಿಳಿದ ಬಂಧುಗಳು ಕೂಡಾ ಡೇವಿಡ್ ನನ್ನು ನೋಡಲು ಮುಗಿಬಿದ್ದಿದ್ದಾರೆ. ಇದು ಕೇಳಲು ವಿಚಿತ್ರ ಅನಿಸಿದರೂ ಆ ಹೆತ್ತವರ ಸಂತೋಷಕ್ಕೆ ಅಂತೂ ಪಾರವೇ ಇರಲಿಲ್ಲ.

Also Read  ಪ್ರವಾದಿ ನಿಂದನೆ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯದಿಂದ ದೂರು ದಾಖಲು

error: Content is protected !!
Scroll to Top