ಗೃಹರಕ್ಷಕರ ವೃತ್ತಿಪರ ಕ್ರೀಡಾ ಕೂಟ ಘಟಕದ 5 ಗೃಹರಕ್ಷಕರು ಜಿಲ್ಲಾ ಮಟ್ಟದಿಂದ ಪಶ್ಚಿಮ ವಲಯ ಮಟ್ಟಕ್ಕೆ ಆಯ್ಕೆ

 (ನ್ಯೂಸ್ ಕಡಬ) newskadaba.com, ಮಂಗಳೂರು, ನ.28.  ಜಿಲ್ಲಾ ಗೃಹ ರಕ್ಷಕ ದಳದ ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ವೃತ್ತಿಪರ ಗೃಹ ರಕ್ಷಕರ ಕ್ರೀಡಾಕೂಟದಲ್ಲಿ ಉಪ್ಪಿನಂಗಡಿ ಘಟಕದ ಐದು ಗೃಹ ರಕ್ಷಕರು ಜಿಲ್ಲಾ ಮಟ್ಟದಿಂದ ಪಶ್ಚಿಮ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಮ್ಮದ್ ಇಕ್ಬಾಲ್, ಚರಣ್ .ಎಂ., ಜುನೈದ್, ಸೂರಜ್ ಹೆಗ್ಡೆ, ಗೃಹ ರಕ್ಷಕಿ ಸುಖಿತಾ ಶೆಟ್ಟಿ, ಘಟಕದ ಐದು ಗೃಹರಕ್ಷಕರು ಜಿಲ್ಲಾ ಮಟ್ಟದಿಂದ ಪಶ್ಚಿಮ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಐದು ಗೃಹ ರಕ್ಷಕರು ಡಿಸೆಂಬರ್ 1 ರಿಂದ 3 ರ ಮೂರು ದಿನಗಳ ವರೆಗೆ ದ.ಕ, ಉಡುಪಿ, ಕಾರವಾರ, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಮಟ್ಟದಲ್ಲಿ ಆಯ್ಕಯಾದ ವೃತ್ತಿಪರ ಗೃಹರಕ್ಷಕರ ಪಶ್ಚಿಮ ವಲಯ ಮಟ್ಟದ ಕ್ರೀಡಾ ಕೂಟ ಮಂಗಳೂರಿನ ಪೋಲೀಸ್ ಪೇರೆಡ್ ಮೈದಾನದಲ್ಲಿ ನಡೆಯಲಿದೆ.

Also Read  ಪುತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ

error: Content is protected !!
Scroll to Top