ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com, ಕುಂತೂರು, ನ.28.  ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಪ್ರಶಿಕ್ಷಣಾರ್ಥಿಗಳಿಗೆ “ಸಮಯ ನಿರ್ವಹಣೆ” ಎಂಬ  ಶೀರ್ಷಿಕೆಯಡಿಯಲ್ಲಿ ಮಾಹಿತಿ ಕಾರ್ಯಗಾರ ನಡೆಸಲಾಯಿತು.

ಕಾಲೇಜಿನ ಸಂಚಾಲಕರಾದ ರೆ/ಫಾ/ಡಾ/ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಸಮಯ ನಿರ್ವಹಣೆಯ ಕುರಿತಂತೆ ಸವಿವರವಾದ ಮಹಿತಿಗಳೊಂದಿಗೆ ಕಾರ್ಯಗಾರ ನಡೆಸಿಕೊಟ್ಟರು. ಬಿ.ಎಡ್. ಪ್ರಶಿಕ್ಷಣಾರ್ಥಿ ಕುಮಾರಿ ಹರ್ಷಿತಾ ಸ್ವಾಗತಿಸಿ, ಉಪನ್ಯಾಸಕಿ ಕುಮಾರಿ ತೃಪ್ತಿ ಎಮ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರಿಮತಿ ಉಷಾ ಎಮ್. ಎಲ್ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದು, ಕಾರ್ಯಗಾರದಲ್ಲಿ ಸಹಕರಿಸಿದರು.

Also Read  ಕಡಬ: ಮರದ ಬಡಿಗೆಗೆ ಬಟ್ಟೆಕಟ್ಟಿ ವೃದ್ದೆಯನ್ನು ಹೊತ್ತೊಯ್ದ ಪ್ರಕರಣಕ್ಕೆ ಟ್ವಿಸ್ಟ್..!

error: Content is protected !!
Scroll to Top