(ನ್ಯೂಸ್ ಕಡಬ) newskadaba.com, ನೆಲ್ಯಾಡಿ. ನ.27. ಭಾರತದೇಶವು ಹಲವಾರು ಧರ್ಮ, ಭಾಷೆ, ಸಂಸ್ಕೃತಿ , ಆಚಾರ-ವಿಚಾರಗಳನ್ನು ಒಳಗೊಂಡ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರ. ದೇಶದಲ್ಲಿ ಒಗ್ಗಟ್ಟು ಹಾಗೂ ಶಾಂತಿಯುತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಡಾ ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ 1949 ನವೆಂಬರ್ 26ರಂದು ಸಂವಿಧಾನ ರಚನೆಯಾಯಿತು. ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಮುಂದುವರೆಯುತ್ತಿರುವ ನಮ್ಮದೇಶದಲ್ಲಿ ಶಿಸ್ತು, ಮಾನವೀಯ ಮೌಲ್ಯಗಳ ಅಗತ್ಯವೂ ಇದೆ. ಆದ್ದರಿಂದ ಈ ಸಂವಿಧಾನ ತತ್ವಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ ಬದುಕಬೆಕು ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆಸಿದ ಸಂವಿಧಾನ ದಿನಾಚರಣೆಯ ಸಂದರ್ಭ ವಿದ್ಯಾರ್ಥಿಗಳನ್ನುದ್ದೇಶಿಸಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ ಮಾತನಾಡಿದರು.
ವಿದ್ಯಾರ್ಥಿಗಳು ನ್ಯಾಯ, ಸಮಾನತೆ, ಭ್ರಾತೃಭಾವನೆ ಮತ್ತು ಸ್ವಾತಂತ್ರ್ಯದ ಪ್ರದರ್ಶನ ಫಲಕ ಹಿಡಿದು ತೋರಿಸುತ್ತ ಭಾರತದ ಸಂವಿಧಾನದ ಪ್ರಸ್ತಾವನೆಯನ್ನುಓದಿದರು. ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.