ನಾಳೆ (ನ.28) ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಲಯದಲ್ಲಿ ವಸ್ತು ಪ್ರದರ್ಶನ ಹಾಗೂ ಮೆಟ್ರಿಕ್ ಮೇಳ

(ನ್ಯೂಸ್ ಕಡಬ) newskadaba.com, ನೆಲ್ಯಾಡಿ. ನ.27.  ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ  ಜೀವನ ಕೌಶಲ್ಯಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮೆಟ್ರಿಕ್ ಮೇಳವು ನಾಳೆ (ನ.28) ಪೂರ್ವಾಹ್ನ 9.30 ಕ್ಕೆ ನ್ಯೂ ಮಿಲೇನಿಯಂ ಹಾಲ್ ನಲ್ಲಿ ನಡೆಯಲಿದೆ.

ವಿಜ್ಞಾನ ವಸ್ತು ಪ್ರದರ್ಶನವನ್ನು ನಿವೃತ್ತ ಮುಖ್ಯ ಗುರುಗಳಾದ ಆರ್.ವೆಂಕಟ್ರಮಣ ಹಾಗೂ ಮೆಟ್ರಿಕ್ ಮೇಳವನ್ನು ನೆಲ್ಯಾಡಿಯ ರಶ್ಮಿ ಡ್ರೆಸ್ ಸೆಂಟರ್ ನ ಮಾಲಕರಾದ ಗಣೇಶ್ ಕೆ.ರಶ‍್ಮಿ ಯವರು ಉದ್ಘಾಟಿಸಲಿದ್ದಾರೆ. ವಾರ್ಷಿಕ ಕ್ರೀಡಾಕೂಟವು ನವೆಂಬರ್ 30 ಶನಿವಾರದಂದು ಪೂರ್ವಾಹ್ನ 9.30 ರಂದು ನಡೆಯಲಿದ್ದು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿಯವರು ದ್ವಜಾರೋಹಣಗೈದು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಎಸ್ ವಿ ಎಸ್ ಕಾಲೇಜು ಬಂಟ್ವಾಳ ಇದರ ದೈ.ಶಿ. ನಿರ್ದೇಶಕರಾದ ಸುಂದರ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂತ ಜಾರ್ಜ್ ವಿದ್ಯಾಸಂಸ್ಥೆಗಳು, ನೆಲ್ಯಾಡಿ ಇದರ ಸಂಚಾಲಕರಾದ ಅಬ್ರಹಾಂ ವರ್ಗೀಸ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಕಾರು ಅಪಘಾತ: ಅಪಾಯದಿಂದ ಪಾರು

error: Content is protected !!
Scroll to Top