ಕಡಬ : ಜಾಂಡೀಸ್ ಗೆ ತುತ್ತಾಗಿ ಯುವಕ ಮೃತ್ಯು

 (ನ್ಯೂಸ್ ಕಡಬ) newskadaba.com, ಕಡಬ, ನ.27.  ಬಲ್ಯ ಗ್ರಾಮದ ಕಲ್ಲೇರಿ ನಿವಾಸಿ ಆನಂದ ಗೌಡ ಎಂಬವರ ಪುತ್ರ, ಅಯ್ಯಪ್ಪ ಮಾಲಾಧಾರಿಯಾಗಿದ್ದ ಚಂದ್ರಶೇಖರ ಗೌಡ (27ವ.)  ಮಂಗಳವಾರದಂದು ಮೃತಪಟ್ಟಿದ್ದಾರೆ.


ವೃತ್ತಿಯಲ್ಲಿ ಚಾಲಕನಾಗಿರುವ ಚಂದ್ರಶೇಖರವರು ನ.21 ರಂದು ದೇರಾಜೆ ಅಯ್ಯಪ್ಪ ಮಂದಿರದಲ್ಲಿ ಶಬರಿಮಲೆ ಯಾತ್ರೆ ಮಾಡಲು ಮಾಲೆ ಹಾಕಿದ್ದರು, ಇವರು ಜಾಂಡಿಸ್‍ನಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಂಗಳೂರಿನ ಕಣಚೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಂದ್ರಶೇಖರವರು ನ.25ರಿಂದ ಅಸೌಖ್ಯದಿಂದ ಬಳಲುತ್ತಿದ್ದು ನ.26ರಂದು ಮುಂಜಾನೆ ದೇರಾಜೆ ಅಯ್ಯಪ್ಪ ಮಂದಿರದಲ್ಲಿ ಇತರ ಅಯ್ಯಪ್ಪ ಮಾಲಾಧಾರಿಯವರೊಂದಿಗೆ ಇದ್ದು ಬೆಳಿಗ್ಗೆ ತೀವ್ರ ಅಸ್ವಸ್ಥಗೊಂಡಾಗ ಅವರನ್ನು ಕಡಬ ಆಸ್ಪತ್ರೆಗೆ ಕರೆತರಲಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಹಾಗೂ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಬಗ್ಗೆ ಸೂಚಿಸಿದ ಹಿನ್ನಲೆಯಲ್ಲಿ ಬಳಿಕ ಕಣಚ್ಚೂರು ಆಸ್ಪತ್ರೆಗೆ ದಾಖಲಿಸಲಾಯಿತು, ಈ ವೇಳೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತರು ತಾಯಿ ಪುಷ್ಪಾವತಿ, ಪತ್ನಿ ವಿನುತಾ ಮಗು ಹೇಮಂತ್ ಅವರನ್ನು ಅಗಲಿದ್ದಾರೆ. ಚಂದ್ರಶೇಖರ ಅವರು ಕಡಬ ಭಾಗದಲ್ಲಿ ಜೆಸಿಬಿಯ ಟಿಪ್ಪರ್ ಚಾಲಕರಾಗಿದ್ದರು.

Also Read  ಅವಮಾನಕಾರಿ ವಿಡಿಯೋ ಪ್ರಸಾರ ಮಾಡಿದ ಕಹಳೆ ನ್ಯೂಸ್ ಚಾನೆಲ್ ವಿರುದ್ದ ಕಾನೂನು ಹೋರಾಟಕ್ಕೆ ತೀರ್ಮಾನ ➤ ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ

error: Content is protected !!
Scroll to Top