ಅಡುಗೆ ಮಾಹಿತಿ ➤ ರವೆ ಟೋಸ್ಟ್ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ನ.27.  ರವೆ ಟೋಸ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು……

ಬ್ರೆಡ್ ಸ್ಲೈಸ್  – 8-10

ಸೂಜಿ ರವೆ – 150 ಗ್ರಾಂ

ಮೊಸರು – 100 ಗ್ರಾಂ

ನೀರು – ಅಗತ್ಯಕ್ಕೆ ಬೇಕಾದಷ್ಟು

ಕಪ್ಪು ಕಾಳು ಮೆಣಸು – ½ ಟೇಬಲ್ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಸಕ್ಕರೆ – 1 ಟೇಬಲ್ ಚಮಚ

ದೊಡ್ಡ ಗಾತ್ರದ ಟೊಮ್ಯಾಟೋ – 1

ಹಸಿಮೆಣಸು – ಸ್ವಲ್ಪ

ಕ್ಯಾಪ್ಸಿಕಮ್ – ½ ಕಪ್

ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ

ಬೆಣ್ಣೆ/ತುಪ್ಪ – ಅಗತ್ಯಕ್ಕೆ

 

ರವೆ ಟೋಸ್ಟ್ ಮಾಡುವ ವಿಧಾನ – ಒಂದು ಬೌಲ್ ನಲ್ಲಿ ಮೊಸರು, ಕರಿಮೆಣಸಿನ ಕಾಳು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ ಹತ್ತು ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.  ಈ ಮಿಶ್ರಣವನ್ನು ಬ್ರೆಡ್ ಸ್ಲೈಸ್ ನ ಮೇಲೆ ಹರಡಿ, ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ ಬ್ರೆಡ್ ಸ್ಲೈಸನ್ನು ಎರಡೂ ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು. ತ್ರಿಭುಜಾಕೃತಿಯಲ್ಲಿ ಕತ್ತರಿಸಿ, ಬಿಸಿ ಇರುವಾಗಲೇ ಇದರ ರುಚಿ ಸವಿಯಿರಿ.

Also Read  ನೇಲ್ಯಡ್ಕ ಸರಕಾರಿ ಶಾಲೆಗೆ ಬಿಜೆಪಿ ಮುಖಂಡ ಅನಿಲ್‌ ಈಶೋರಿಂದ ಕಂಪ್ಯೂಟರ್ ಕೊಡುಗೆ

error: Content is protected !!
Scroll to Top