ಬಿಬಿಎ ಪದವಿ ಪರೀಕ್ಷೆ – ಅಂತಿಮ ರ್ಯಾಂಕ್ ಪಟ್ಟಿ

(ನ್ಯೂಸ್ ಕಡಬ) newskadaba.com, ಮಂಗಳೂರು, ನ.27. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಎಪ್ರಿಲ್/ಮೇ 2019ರ ಬಿಬಿಎ ಪರೀಕ್ಷೆಯ ವಿಜೇತ ವಿದ್ಯಾರ್ಥಿಗಳ ಅಂತಿಮ ರ್ಯಾಂಕ್ ಪಟ್ಟಿ ಪ್ರಕಟಿಸಲಾಗಿದೆ.

ಮಂಗಳೂರು ಎಸ್.ಡಿ.ಎಂ ಕಾಲೇಜಿನ ದೀಕ್ಷಾ ವಿ ಪ್ರಥಮ ರ್ಯಾಂಕ್ – 93.06%, ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸ್ವಾತಿ ದ್ವಿತೀಯ ರ್ಯಾಂಕ್ – 92.22%, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ರೋಶನಿ ಎಂ.ವೈ ತೃತೀಯ ರ್ಯಾಂಕ್ – 91.16%, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಶಬನ ನಾಲ್ಕನೇ ರ್ಯಾಂಕ್-88.66%, ಬೆಟ್ಟಂಪಾಡಿ ಸರರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೇಮಚಂದ್ರ ಕೆ. ಐದನೇ ರ್ಯಾಂಕ್-88.08%, ಕುಂದಾಪುರ ಭಂಡಾರ್ಕಾರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜಿನ ಪ್ರಿಯಾಂಕ, ಶಂಕರ್ ಶೆಟ್ಟಿ ಆರನೇ ರ್ಯಾಂಕ್-86.94%, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಚೆರ್ಸ್ ಸಿರಿಲ್ ಡಿಸೋಜಾ ಏಳನೇ ರ್ಯಾಂಕ್ 86.72%, ಮಂಗಳೂರು ಎಸ್.ಡಿ.ಎಂ ಕಾಲೇಜಿನ ನಿಶ್ಮಿತಾ ಬಿ ಎಂಟನೇ ರ್ಯಾಂಕ್ -86.26%, ಮೂಡಬಿದ್ರೆ ಶ್ರೀ ಧವಳಾ ಕಾಲೇಜಿನ ಕಾರ್ತಿಕಾ ಒಂಭತ್ತನೇ ರ್ಯಾಂಕ್ – 86.22%, ಮುಲ್ಕಿ ವಿಜಯ ಕಾಲೇಜಿನ ಸಲ್ಮಾ ತಭಾಸುಮ್ ಹತ್ತನೇ ರ್ಯಾಂಕ್ -85.92% ಅಂಕಗಳನ್ನು ಪಡೆದಿರುತ್ತಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಪರೀಕ್ಷಾಂಗ ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಶ್ರೀ ಮಧ್ವಶಂಕರ ನಾಮಕರಣ ಮಾಡಿ ➤ ಪುತ್ತಿಗೆ ಶ್ರೀ ಆಗ್ರಹ

 

error: Content is protected !!
Scroll to Top